LATEST NEWS
ಬಿಗಡಾಯಿಸಿದ ಉಸಿರಾಟದ ಸಮಸ್ಯೆ ಗಂಭೀರ ಸ್ಥಿತಿಯಲ್ಲಿ ಪೋಪ್ ಫ್ರಾನ್ಸಿಸ್

ವ್ಯಾಟಿಕನ್ ಸಿಟಿ ಫೆಬ್ರವರಿ 23: ಪೋಪ್ ಫ್ರಾನ್ಸಿಸ್ ಅವರ ಆರೋಗ್ಯ ಹದಗೆಟ್ಟಿದ್ದು, ಅವರ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ವ್ಯಾಟಿಕನ್ ಶನಿವಾರ ದೃಢಪಡಿಸಿದ್ದು, “ದೀರ್ಘಕಾಲದ ಆಸ್ತಮಾದಂತಹ ಉಸಿರಾಟದ ಸಮಸ್ಯೆಯಿಂದ” ಬಳಲುತ್ತಿರುವ ಪೋಪ್ ಅವರು “ನಿನ್ನೆಗಿಂತ ಹೆಚ್ಚು ಅಸ್ವಸ್ಥರಾಗಿದ್ದಾರೆ” ಎಂದು ಹೇಳಿದೆ.
ಡಬಲ್ ನ್ಯುಮೋನಿಯಾದಿಂದ ಆಸ್ಪತ್ರೆಗೆ ದಾಖಲಾಗಿರುವ 87 ವರ್ಷದ ಪೋಪ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಅವರ ಸ್ಥಿತಿ ಗಂಭೀರವಾಗಿದೆ. ಇಂದು ಬೆಳಿಗ್ಗೆ ಪೋಪ್ ಫ್ರಾನ್ಸಿಸ್ ದೀರ್ಘಕಾಲದ ಆಸ್ತಮಾದಿಂದ ಬಳಲುತ್ತಿದ್ದಜಾರೆ. ಅಲ್ಲದೆ ಅವರಿಗೆ ರಕ್ತ ಹೀನತೆ ಹಿನ್ನಲೆ ರಕ್ತ ವರ್ಗಾವಣೆ ಮಾಡಲಾಗಿದೆ ಎಂದು ವ್ಯಾಟಿಕನ್ ಪ್ರಕಟಣೆ ತಿಳಿಸಿದೆ. ಪೋಪ್ ಸ್ಥಿತಿ ಗಂಭೀರವಾಗಿರುವ ಹಿನ್ನಲೆ ಇದೀಗ ವ್ಯಾಟಿಕನ್ ಪೋಪ್ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೆಲ್ತ್ ಬುಲೆಟಿನ್ ನ್ನು ಬಿಡುಗಡೆ ಮಾಡುತ್ತಿದೆ.
