Connect with us

    FILM

    ಸಲ್ಮಾನ್ ಖಾನ್ ಜೊತೆ ಡೇಟಿಂಗ್ ವದಂತಿ – ನಾನು ಸದ್ಯ ಸಿಂಗಲ್ ಅಂದ ನಟಿ ಪೂಜಾ ಹೆಗ್ಡೆ

    ಮುಂಬೈ ಎಪ್ರಿಲ್ 14 : ಬಾಲಿವುಡ್ ನಟ ಸಲ್ಮಾನ್ ಖಾನ್ ಜೊತೆ ಡೇಟಿಂಗ್ ವದಂತಿ ಕುರಿತಂತೆ ನಟಿ ಪೂಜಾ ಹೆಗ್ಡೆ ಮೌನ ಮುರಿದಿದ್ದು, ನಾನು ಸದ್ಯ ಸಿಂಗಲ್. ಈಗ ಕೇವಲ ನನ್ನ ವೃತ್ತಿಜೀವನದ ಬಗ್ಗೆ ಅಷ್ಟೇ ದೃಷ್ಟಿ ನೆಟ್ಟಿದ್ದೇನೆ ಎಂದರು.


    ಸಲ್ಮಾನ್ ಖಾನ್ ಜೊತೆ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಚಿತ್ರದಲ್ಲಿ ಪೂಜಾ ಹೆಗ್ಡೆ ನಟಿಸಿದ್ದಾರೆ. ಕೆಲ ತಿಂಗಳುಗಳಿಂದ ಸಲ್ಮಾನ್ ಖಾನ್- ಪೂಜಾ ಹೆಗ್ಡೆ ಡೇಟಿಂಗ್ ಕುರಿತಂತೆ ವದಂತಿಗಳು ಹಬ್ಬುತ್ತಿದ್ದು, ಇಬ್ಬರೂ ಸಹ ಇದನ್ನು ಒಪ್ಪಿಕೊಂಡಿಲ್ಲ ಹಾಗೂ ನಿರಾಕರಿಸಿಯೂ ಇಲ್ಲ. ಮಂಗಳೂರಿನಲ್ಲಿ ನಡೆದ ಪೂಜಾ ಹೆಗ್ಡೆ ಸಹೋದರನ ವಿವಾಹ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ಭಾಗವಹಿಸಿದ್ದ ಬಳಿಕ ವದಂತಿ ಮತ್ತಷ್ಟು ಜೋರಾಗಿತ್ತು. ಮದುವೆ ಕಾರ್ಯಕ್ರಮದ ಹಲವು ಚಿತ್ರಗಳು ಆನ್‌ಲೈನ್‌ನಲ್ಲಿ ಹರಿದಾಡಿದ್ದವು.


    ನಾನು ಇದರ ಬಗ್ಗೆ ಏನು ಹೇಳಲಿ. ನನ್ನ ಕುರಿತಾದ ವದಂತಿಗಳ ಬಗ್ಗೆ ಬಹಳ ಓದುತ್ತಿದ್ದೇನೆ. ನಾನು ಸದ್ಯ ಸಿಂಗಲ್. ಈಗ ಕೇವಲ ನನ್ನ ವೃತ್ತಿಜೀವನದ ಬಗ್ಗೆ ಅಷ್ಟೇ ದೃಷ್ಟಿ ನೆಟ್ಟಿದ್ದೇನೆ. ಈ ವದಂತಿಗಳ ಬಗ್ಗೆ ವಿವರಣೆ ನೀಡಲು ನನಗೆ ಸಮಯವಿಲ್ಲ’ ಎಂದು ಅವರು ಹೇಳಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply