FILM
ಮಾಲ್ಡೀವ್ಸ್ ನ ಕಡಲ ತೀರದಲ್ಲಿ ಕರಾವಳಿ ಬೆಡಗಿ ಪೂಜಾ ಹೆಗ್ಡೆ ಹಾಟ್ ಲುಕ್

ಟಾಲಿವುಡ್ ಹಾಗೂ ಬಾಲಿವುಡ್ ನಲ್ಲಿ ಬೇಡಿಕೆ ನಟಿಯಾಗಿ ಗುರುತಿಸಿಕೊಂಡಿರುವ ಉಡುಪಿ ಮೂಲದ ಪೂಜಾ ಹೆಗ್ಡೆ ಚಿತ್ರೀಕರಣದ ಬಿಡುವಿನ ಸಂದರ್ಭದಲ್ಲಿ ಮಾಲ್ಡೀವ್ಸ್ ಪ್ರವಾಸಕ್ಕೆ ತೆರಳಿದ್ದಾರೆ.
ಲಾಕ್ ಡೌನ್ ತೆರವಿನ ಬಳಿಕ ಇದೀಗ ಮಾಲ್ಡೀವ್ಸ್ ಕಡೆ ಸೆಲೆಬ್ರೆಟಿಗಳು ತೆರಳುತ್ತಿದ್ದು, ತಮ್ಮ ತಮ್ಮ ಬಿಕಿನಿ ಪೋಟೋಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಬೆಂಕಿ ಹಚ್ಚುತ್ತಿದ್ದಾರೆ.

ಇದೀಗ ಮಾಲ್ಡೀವ್ಸ್ ನಲ್ಲಿ ಹಾಲಿಡೇ ಮೂಡ್ ನಲ್ಲಿರುವ ಪೂಜಾ ಹೆಗ್ಡೆ ತಮ್ಮ ಬಿಕಿನಿಯಲ್ಲಿ ತೆಗೆದ ಹಾಟ್ ಪೋಟೋ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಲ್ಡೀವ್ಸ್ ಕಡಲ ತೀರದಲ್ಲಿ ವಿಹರಿಸುತ್ತಾ, ಒಂದು ಅಸಾಮಾನ್ಯ ಅನುಭವಕ್ಕಾಗಿ ಎದುರು ನೋಡುತ್ತಿರುವ ಸಾಮಾನ್ಯ ಹುಡುಗಿ.. ಎಂಬ ಅಡಿಬರಹದೊಂದಿಗೆ ಪೂಜಾ ಹೆಗ್ಡೆ ಹೊಸ ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ.
ಬಿಕಿನಿಯಲ್ಲಿ ಮಿಂಚುತ್ತಿರುವ ಪೂಜಾ ಅವರ ಚಿತ್ರಗಳನ್ನು ನೆಟ್ಟಿಗರು ಮೆಚ್ಚಿಕೊಳ್ಳುತ್ತಿದ್ದಾರೆ. ಬಿಕಿನಿಯಲ್ಲಿ ತೆಗೆಸಿಕೊಂಡ ಚಿತ್ರಗಳನ್ನು ಪೂಜಾ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಶೇರ್ ಮಾಡುತ್ತಿದ್ದಾರೆ.