DAKSHINA KANNADA
ಒಂದು ಕುಟುಂಬ, ಹೆಣ್ಣು ಮಗುವಿನ ಜೀವನದ ಪ್ರಶ್ನೆ ಇದ್ರಲ್ಲಿ ರಾಜಕೀಯ ಸರಿಯಲ್ಲ: ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ

ಮಂಗಳೂರು, ಜುಲೈ 09: ಪುತ್ತೂರು ಮದುವೆಯಾಗುದಾಗಿ ನಂಬಿಸಿ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪ್ರತಿಕ್ರಿಯೆ ನೀಡಿದ್ದಾರೆ.
ಜಗನ್ನಿವಾಸ್ ಅವರಿಗೆ ಪುತ್ತೂರು ಬಿಜೆಪಿ ಮಂಡಳ ಅಧ್ಯಕ್ಷರು ನೋಟಿಸ್ ನೀಡಿದ್ದಾರೆ. ಯುವತಿಯನ್ನು ಮದುವೆ ಮಾಡಿಸುತ್ತೇನೆ ಎಂದಿದ್ರು. ಆದ್ರೆ ಇದೀಗಾ ಮದುವೆ ಆಗದೆ ವಂಚನೆ ಮಾಡಿದ್ದು ಸರಿಯಲ್ಲ. ಭರವಸೆ ನೀಡಿದಂತೆ ನಡೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಘಟನೆ ನಡೆದ ಬಳಿಕ ಸುಮ್ಮನಿದ್ದ ಬಿಜೆಪಿ ಎಂದು ಆರೋಪ ವಿಚಾರಕ್ಕೆ ಪ್ರತಿಕ್ರಿಸಿದ ಅವರು, ಈ ವಿಚಾರದಲ್ಲಿ ಬಿಜೆಪಿ ಕುಟುಂಬದ ವಿಚಾರವಾಗಿದೆ. ಸಾರ್ವಜನಿಕವಾಗಿ ಹೇಳುವ ಅವಶ್ಯಕತೆ ಇಲ್ಲ. ಒಂದು ಕುಟುಂಬ, ಹೆಣ್ಣು ಮಗುವಿನ ಜೀವನದ ಪ್ರಶ್ನೆ, ಮತ್ತು ಆಕೆಗೆ ಗಂಡ ಬೇಕು. ಇದ್ರಲ್ಲಿ ರಾಜಕೀಯ ಸರಿಯಲ್ಲ ಸಾರ್ವಜನಿಕವಾಗಿ ಮಾಡುವ ವಿಚಾರವು ಅಲ್ಲ.
ಈಗಾಲೆ ಪಕ್ಷದ ಮಂಡಳದಿಂದ ನೋಟಿಸ್ ನೀಡಲಾಗಿದೆ. ಇದಕ್ಕೆ ಉತ್ತರ ಪಡೆಯಲಿದ್ದೇವೆ ಯುವತಿಗೆ ನ್ಯಾಯ ಕೊಡಸಬೇಕು. ಇದಕ್ಕೆ ತಪ್ಪಿದರೆ ಅವರ ವಿರುದ್ದ ಶಿಸ್ತು ಕ್ರಮ ತೆಗೆದು ಕೊಳ್ಳಲಾಗುವುದು ಎಂದಿದ್ದಾರೆ.