LATEST NEWS
ದ.ಕ ಜಿಲ್ಲೆಯಲ್ಲಿ ಹಿಂದುಳಿದ ವರ್ಗಕ್ಕೆ ರಾಜಕೀಯ ತುಳಿತ : ಕಣಕ್ಕಿಳಿಯಲಿದ್ದಾರೆ ಸ್ವತಂತ್ರ ಅಭ್ಯರ್ಥಿಗಳು
ದ.ಕ ಜಿಲ್ಲೆಯಲ್ಲಿ ಹಿಂದುಳಿದ ವರ್ಗಕ್ಕೆ ರಾಜಕೀಯ ತುಳಿತ : ಕಣಕ್ಕಿಳಿಯಲಿದ್ದಾರೆ ಸ್ವತಂತ್ರ ಅಭ್ಯರ್ಥಿಗಳು
ಮಂಗಳೂರು, ಎಪ್ರಿಲ್ 21 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳಿಂದ ಹಿಂದುಳಿದ ವರ್ಗದ ಜನರಿಗೆ ಅನ್ಯಾಯವಾಗಿದೆ ಎಂಬ ಕೂಗು ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿದೆ.
ಅದು ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಟಿಕೆಟ್ ಘೊಷಣೆಯಾದ ಬಳಿಕ ಸ್ವಲ್ಪ ಜೋರಾಗಿಯೇ ಕೇಳಿಸುತ್ತಿದೆ.
ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಜಿಲ್ಲೆಯಲ್ಲಿ ಟಿಕೆಟ್ ನೀಡುವಾಗ ಹಿಂದುಳಿದ ವರ್ಗದವರನ್ನು ಕಡೆಗಣಿಸಿದ್ದಾರೆ
ಮತ್ತು ಇಲ್ಲಿನ ಪ್ರಮುಖ ಹಿಂದುಳಿದ ವರ್ಗಗಳನ್ನು ಗಣನೆಗೆ ತೆಗೆದುಕೊಳ್ಳದೆ ಮೋಸ ಮಾಡಿವೆ ಎಂಬ ಅರೊಪ ಇಲ್ಲಿಯವರದ್ದು ,
ಅದರಲ್ಲೂ ಬಿಜೆಪಿ ಬಂಟ ಸಮುದಾಯಕ್ಕೆ ನಾಲ್ಕು, ಒಂದು ಗೌಡ , ಪರಿಶಿಷ್ಟ ಜಾತಿ/ ಪಂಗಡ ಒಂದು ,ಜಿಎಸ್ ಬಿ ಗೆ ಒಂದು ಟಿಕೆಟ್ ಗಳನ್ನುನೀಡಿದರೆ,
ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಬಿಲ್ಲವ ಸಮುದಾಯಕ್ಕೆ ಕೇವಲ ಒಂದೇ ಟಿಕೆಟ್ ನೀಡಲಾಗಿದೆ.
ಇದು ಅಸಮಾಧಾನಕ್ಕೆ ಕಾರಣವಾಗಿದೆ.
ಮತ್ತೊಂದು ಪ್ರಮುಖ ಪಕ್ಷ ಕಾಂಗ್ರೆಸ್ 8 ರಲ್ಲಿ 4 ಅಲ್ಪ ಸಂಖ್ಯಾತರಿಗೆ ಬಂಟರಿಗೆ 2 ,ಒಂದು ಪರಿಶಿಷ್ಟ ಜಾತಿ/ಪಂಗಡ ಕ್ಕೇ ನೀಡಿದರೆ ಕೇವಲ ಒಂದು ಮಾತ್ರ ಬಿಲ್ಲವರಿಗೆ ನೀಡಲಾಗಿದೆ.
ಇದು ಜಿಲ್ಲೆಯ ಪ್ರಮುಖ ಜಾತಿ ಸಮುದಾಯವಾಗಿರುವ ಬಿಲ್ಲವರ ಅಸಮಾಧಾಕ್ಕೆ ಕಾರಣವಾಗಿದೆ,
ಬಿಲ್ಲವ ಸಮಾಜದ ಮುಂದಾಳುಗಳ ಪ್ರಕಾರ ಸಮಾಜಕ್ಕೆ ಮತ್ತೆ ಮತ್ತೆ ಮೋಸವಾಗುತ್ತಿದೆ. ಜಿಲ್ಲೆಯಲ್ಲಿ ಬಹು ಸಂಖ್ಯಾತರಾದ ಬಿಲ್ಲವರಲ್ಲಿ ಅನೇಕ ಉತ್ತಮ ನಾಯಕರಿದ್ದಾರೆ,
ರಾಜಕೀಯ ಪಕ್ಷಗಳಲ್ಲಿ ದುಡಿದವರಿದ್ದಾರೆ ಆದರೆ ಮತ್ತೆ ಬಿಲ್ಲವರ ಅಭ್ಯರ್ಥಿಗಳನ್ನು ಕಡೆಗಣಿಸಿ ಇಡೀ ಜಿಲ್ಲೆಯ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿ.ಜೆ.ಪಿ ಪಕ್ಷಗಳು ಕೇವಲ ಒಂದೇ ಒಂದು ಟಿಕೆಟ್ ನೀಡಿ ಬಿಲ್ಲವ ಸಮಾಜವನ್ನು ಕಡೆಗಣಿಸಿದ್ದಾರೆ.
ಈ ಎರಡು ಪಕ್ಷಗಳ ಕುತಂತ್ರ ಬಿಲ್ಲವ ಸಮಾಜದ ಯುವಕರನ್ನು ಬಳಸಿಕೊಳ್ಳುವುದೇ ಆಗಿದೆ ಹೊರತು ರಾಜಕೀಯವಾಗಿ ಬಿಲ್ಲವರನ್ನು ಬೆಳೆಯಲು ಬಿಡುತ್ತಿಲ್ಲ ಎಂಬುವುದು ಇವರ ಅರೋಪ.
ಈ ಹಿನ್ನೆಲೆಯಲ್ಲಿ ಯುವ ಸಂಘಟನೆ ಬಿರುವೆರ್ ಕುಡ್ಲ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವ ನಿರ್ಧಾರ ಮಾಡಿದೆ.
ಅದ್ದರಿಂದ ಬಿರುವೆರ್ ಕುಡ್ಲ ಸದ್ಯದಲ್ಲೇ ಜಿಲ್ಲೆಯ ಒಂದು ಕ್ಷೇತ್ರದಲ್ಲಿ ಅಭ್ಯರ್ಥಿ ಕಣಕ್ಕಿಳಿಸುವ ನಿರ್ಧಾರ ಮಾಡಿದೆ.
ಈ ಮಹತ್ವದ ನಿರ್ಧಾರ ಮುಂದೆ ಮಹತ್ವದ ಬದಲಾವಣೆಗೆ ಕಾರಣವಾಗಲಿದೆ.
ಮುಂಬರುವ ದಿನಗಳಲ್ಲಿ ಇತರ ಸಂಘಟನೆಗಳು ಇದೇ ಹಾದಿಯನ್ನು ತುಳಿಯುವ ಸಾಧ್ಯತೆಗಳಿವೆ.