Connect with us

    DAKSHINA KANNADA

    ಕಡಬ ಹಳೆ ಪೋಲೀಸ್ ಠಾಣೆ ಸ್ಪೋಟ ಪ್ರಕರಣ, ಇನ್ನೂ ನಿಗೂಢವಾಗಿ ಉಳಿದ ಕಾರಣ

    ಕಡಬ ಹಳೆ ಪೋಲೀಸ್ ಠಾಣೆ ಸ್ಪೋಟ ಪ್ರಕರಣ, ಇನ್ನೂ ನಿಗೂಢವಾಗಿ ಉಳಿದ ಕಾರಣ

    ಪುತ್ತೂರು, ಮೇ 26: ಮೇ 16 ರಂದು ಪುತ್ತೂರು ತಾಲೂಕಿನ ಕಡಬ ಪೋಲೀಸ್ ಠಾಣೆಯ ಆವರಣದಲ್ಲೇ ನಡೆದ ಸ್ಪೋಟ ಘಟನೆಯನ್ನು ಇದೀಗ ಪೋಲೀಸರಿಂದಲೇ ಮುಚ್ಚಿಹಾಕುವ ಪ್ರಯತ್ನಗಳು ನಡೆಯುತ್ತಿದೆ.

    ಮೇ 16 ರ ಬುಧವಾರ ರಾತ್ರಿ ಸುಮಾರು 7 ಗಂಟೆಗೆ ಕಡಬ ಪೋಲೀಸ್ ಠಾಣೆಯ ಆವರಣದಲ್ಲೇ ಇರುವ ಠಾಣೆಯ ಹಳೆಯ ಕಟ್ಟಡದಲ್ಲಿ ಈ ಸ್ಟೋಟ ಸಂಭವಿಸಿತ್ತು.

    ಸ್ಪೋಟದ ರಭಸಕ್ಕೆ ಕಟ್ಟಡದ ಮೇಲ್ಛಾವಣಿ ಸಂಪೂರ್ಣ ಕುಸಿದಿದ್ದು, ಗೋಡೆಗಳು ಭಾಗಶ ಕುಸಿದು ಬಿದ್ದಿತ್ತು. ಸ್ಪೋಟದ ಶಬ್ದ ಇಡೀ ಕಡಬ ಪರಿಸರದ ಜನರನ್ನು ಬೆಚ್ಚಿ ಬೀಳಿಸಿತ್ತು.

    ಈ ಹಿನ್ನಲೆಯಲ್ಲಿ ಆತಂಕಗೊಂಡ ಜನತೆ ಠಾಣೆಯ ಮುಂದೆ ಭಾರೀ ಸಂಖ್ಯೆಯ ಜನರಿದ್ದರು. ಕಡಬ ಪೋಲೀಸರು ಇದು ಯಾವುದೇ ಸ್ಪೋಟವಲ್ಲ, ಸಿಡಿಲು ಬಡಿದು ಈ ರೀತಿ ಸಂಭವಿಸಿದೆ ಎಂದು ಬಂದ ಜನರನ್ನು ವಾಪಾಸು ಕಳಿಸುವ ಪ್ರಯತ್ನ ನಡೆಸಿದ್ದರು.

    ಆದರೆ ಪೋಲೀಸರು ಹೇಳುವ ಪ್ರಕಾರ ಕಡಬ ಪರಿಸರದಲ್ಲಿ ಸಿಡಿಲು-ಗುಡುಗಿನ ಪತ್ತೆಯೇ ಇರಲಿಲ್ಲ.

    ಬಳಿಕ ತಿಳಿದ ಮಾಹಿತಿ ಪ್ರಕಾರ ಪೋಲೀಸರು ಎಲ್ಲಿಂದಲೂ ಸಂಗ್ರಹಿಸಿದ ಸ್ಪೋಟಕವಾದ ಆರ್.ಡಿ.ಎಕ್ಸ್ ಅನ್ನು ಈ ಕಟ್ಟಡದಲ್ಲಿ ಸಂಗ್ರಹಿಸಿಟ್ಟಿದ್ದರು.

    ಕಾಡು ಹಂದಿಗಳನ್ನು ಬೇಟೆಯಾಡಲು ಹಾಗೂ ಕಲ್ಲಿನ ಕೋರೆಗಳನ್ನು ಒಡೆಯಲು ಈ ಆರ್.ಡಿ.ಎಕ್ಸ್ ಅನ್ನು ಸ್ಥಳೀಯ ಕೆಲವರು ಆಕ್ರಮವಾಗಿ ಬಳಸಿಕೊಳ್ಳುತ್ತಿದ್ದರು.

    ಈ ಸ್ಪೋಟಕಗಳನ್ನು ಯಾವುದೇ ಭದ್ರತೆಯನ್ನು ಕಾಯ್ದುಕೊಳ್ಳದೆ ಸಂಗ್ರಹಿಸಿಟ್ಟ ಹಿನ್ನಲೆಯಲ್ಲಿ ಸ್ಪೋಟಗೊಂಡಿತ್ತು.

    ಸ್ಪೋಟ ಸಂಭವಿಸುವುದಕ್ಕೆ ಎರಡು ನಿಮಿಷಗಳ ಮೊದಲು ಸ್ಪೋಟ ಸಂಭವಿಸಿದ ಕಟ್ಟಡದಲ್ಲಿ ಕಡಬ ಪೋಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿರುವ ಹೋಂಗಾರ್ಡ್ ವಿಶ್ರಾಂತಿ ಪಡೆಯುತ್ತಿದ್ದರು.

    ಒಂದು ವೇಳೆ ಸ್ಪೋಟ ಸಂಭವಿಸಿದ ಸಮಯದಲ್ಲಿ ಹೋಂಗಾರ್ಡ್ ಗಳು ಕಟ್ಟಡದ ಒಳಗೆ ಇದ್ದಲ್ಲಿ ಭಾರೀ ಅನಾಹುತವೇ ಸಂಭವಿಸುತ್ತಿತ್ತು.

    ಸ್ಪೋಟ ಸಂಭವಿಸಿದ ಬಳಿಕ ಕಡಬ ಪೋಲೀಸರು ಘಟನೆಯ ತನಿಖೆಯನ್ನೂ ನಡೆಸಿಲ್ಲ. ಇದೇ ರೀತಿಯ ಘಟನೆ ಜನಸಾಮಾನ್ಯನೊಬ್ಬನ ಮನೆಯಲ್ಲೂ ಅಥವಾ ಇನ್ಯಾವುದೋ ಕಡೆಯಲ್ಲಿ ಸಂಭವಿಸುತ್ತಿದ್ದರೆ ಪೋಲೀಸರ ನಡೆ ಯಾವ ರೀತಿ ಇರುತ್ತಿತ್ತು ಎನ್ನುವ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

    ಜನಸಾಮಾನ್ಯನ ಮನೆಯಲ್ಲಿ ನಡೆದಲ್ಲಿ , ಘಟನಾ ಸ್ಥಳಕ್ಕೆ ಶ್ವಾನದಳ, ಬಾಂಬ್ ಸ್ಕೋರ್ಡ್ , ಆ ದಳ, ಈ ದಳದಿಂದ ತನಿಖೆಯನ್ನು ಕೈಗೊಳ್ಳುತ್ತಿದ್ದ ಪೋಲೀಸರು ತಮ್ಮ ನಿರ್ಲಕ್ಷದಿಂದ ಆದ ಘಟನೆ ಕುರಿತು ಯಾಕೆ ತನಿಖೆ ನಡೆಸುತ್ತಿಲ್ಲ ಎನ್ನುವ ಪ್ರಶ್ನೆಗಳೂ ಕೇಳಿ ಬರುತ್ತಿದೆ.

    ಜನಸಾಮಾನ್ಯನಿಗೊಂದು ನ್ಯಾಯ, ಪೋಲೀಸರಿಗೊಂದು ನ್ಯಾಯ ಎಂದಾದರೆ ಸಂವಿಧಾನ ಎನ್ನುವುದು ಇರುವುದಾದರೂ ಏಕೆ ಎನ್ನುವ ಗೊಂದಲವೂ ಸಾರ್ವಜನಿಕರಲ್ಲಿ ಮೂಡಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *