LATEST NEWS
ಚೆಕ್ ಪೋಸ್ಟಿನಲ್ಲಿ ವಾಹನ ಬಿಡದ ಪೊಲೀಸರು: ಚಿಕಿತ್ಸೆ ಸಿಗದೇ ಮಹಿಳೆ ಸಾವು

ಉಡುಪಿ, ಮೇ 10: ಚೆಕ್ ಪೋಸ್ಟಿನಲ್ಲಿ ಪೊಲೀಸರು ವಾಹನ ಹೋಗಲು ಬಿಡದೇ ಹಾಗೂ ಆಸ್ಪತ್ರೆಯಲ್ಲಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಮಹಿಳೆ ಸಾವನ್ಪಿದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನಡೆದಿದೆ.
ನಲ್ಲೂರು ನಿವಾಸಿ ಮಂಜುಳಾ (33) ಮೃತ ದುರ್ದೈವಿ. ಮಂಜುಳಾ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದ್ದು, ಕಾರಿನಲ್ಲಿ ಆಸ್ಪತ್ರೆಗೆ ಕರೆತರಲಾಗುತ್ತಿತ್ತು. ಈ ವೇಳೆ ಬಜಗೋಳಿ ಚೆಕ್ ಪೋಸ್ಟ್ ವಾಹನ ಅಡ್ಡಗಟ್ಟಿದ ಪೊಲೀಸ್ ಸಿಬ್ಬಂದಿ, ಖಾಸಗಿ ವಾಹನಕ್ಕೆ ಅನುಮತಿ ಇಲ್ಲ. ಆ್ಯಂಬುಲೆನ್ಸ್ ಗೆ ಕರೆ ಮಾಡಿ, ಅದರಲ್ಲಿ ತೆಗೆದುಕೊಂಡು ಹೋಗಿ ಎಂದು ಸೂಚಿಸಿದ್ದಾರೆ.

ಎಷ್ಟೇ ಮನವಿ ಮಾಡಿಕೊಂಡರು ಆಸ್ಪತ್ರೆಗೆ ತೆರಳಲು ಅವಕಾಶ ಮಾಡಿಕೊಟ್ಟಿಲ್ಲ, ಕೊನೆಗೆ ಅಲ್ಲಿಂದು ಹಿಂದುರಿಗಿ ಬಂದು, ಬೇರೆ ರಸ್ತೆ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ಇತ್ತ ಆಸ್ಪತ್ರೆಯಲ್ಲಿಯೂ ವಿಳಂಬವಾಗಿದ್ದರಿಂದ ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯದೆ ಸಾವನ್ನಪ್ಪಿದ್ದಾಳೆ ಎಂದು ಮೃತಳ ಸಂಬಂಧಿಕರು ಆರೋಪಿಸಿದ್ದಾರೆ. ಅಕ್ಕನನ್ನು ಕಳೆದುಕೊಂಡ ಸಹೋದರಿಯ ಆಕ್ರಂದನ ಮುಗಿಲು ಮುಟ್ಟುವಂತಿತ್ತು.
Video: