LATEST NEWS
ಡಿಸೆಂಬರ್ 15ರಂದು ಬಂದ ಬೋಟ್ ದುರಂತದ ವಯರ್ ಲೆಸ್ ಮೇಸೆಜ್ ?
ಡಿಸೆಂಬರ್ 15ರಂದು ಬಂದ ಬೋಟ್ ದುರಂತದ ವಯರ್ ಲೆಸ್ ಮೇಸೆಜ್ ?
ಉಡುಪಿ ಜನವರಿ 13: ಮಲ್ಪೆ ಮೀನುಗಾರಿಕಾ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿದ್ದ ಸುವರ್ಣ ತ್ರಿಭುಜ ಬೋಟ್ ನ ಬಗ್ಗೆ ಈಗ ಮಾಹಿತಿಯೊಂದು ಲಭ್ಯವಾಗಿದ್ದು, ಡಿಸೆಂಬರ್ 15ರಂದು ಮಹಾರಾಷ್ಟ್ರದ ಮಾಲ್ವಾನ್ ಸಮುದ್ರತೀರದಲ್ಲಿ ಅನಾಮಧೇಯ ಬೋಟ್ ದುರಂತಕ್ಕೀಡಾಗಿರುವ ಬಗ್ಗೆ ಅಲ್ಲಿನ ಮೀನುಗಾರರು ವೈರ್‌ಲೆಸ್ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.
ಮಲ್ಪೆ ಮೀನುಗಾರಿಕಾ ಬಂದರಿನಿಂದ ಆಳ ಸಮುದ್ರಕ್ಕೆ ತೆರಳಿದ್ದ ಸುವರ್ಣ ತ್ರಿಭುಜ ಎಂಬ ಬೋಟ್ ಹಾಗೂ ಅದರಲ್ಲಿದ್ದ 7 ಮಂದಿ ಮೀನುಗಾರರ ನಾಪತ್ತೆಯಾಗಿದ್ದರು. ಈ ನಡುವೆ ಮೀನುಗಾರರ ಪತ್ತೆಗಾಗಿ ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರ ವಿಶೇಷ ತಂಡಗಳನ್ನು ರಚಿಸಿ ತನಿಖೆ ನಡೆಸುತ್ತಿದ್ದೆ.
ಡಿಸೆಂಬರ್ 15 ರಂದು ಮಲ್ಪೆಯ `ಸುವರ್ಣ ತ್ರಿಭುಜ’ ಬೋಟು ಸಂಪರ್ಕ ಕಡಿತವಾಗಿತ್ತು. ಬಳಿಕ ಆ ಭಾಗದಲ್ಲಿ ಸಂಚರಿಸಿದ ಎಲ್ಲಾ ಹಡಗುಗಳ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಒಂದು ಮೂಲದ ಪ್ರಕಾರ ಆ ಭಾಗದಲ್ಲಿ ಹಾದು ಹೋದ ಹಡಗಿನ ಮೂಲಕ ಒಂದು ವಯರ್ ಲೆಸ್ ಮೆಸೇಜ್ ಹೋಗಿದೆ. ಆ ಮೆಸೇಜಿನಲ್ಲಿ ಬೋಟು ಅಪಘಾತದ ಬಗ್ಗೆ ಪ್ರಸ್ತಾಪವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಆ ಹಡಗು ಯಾವುದು? ಅವರು ನೋಡಿದ ಬೋಟು ಅಪಘಾತ ಯಾವುದು ಎಂಬುದನ್ನು ತಿಳಿಯಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಉಡುಪಿ ಪೊಲೀಸರು ಮಾಲ್ವಾನಲ್ಲಿ ಬೀಡುಬಿಟ್ಟು ತನಿಖೆ ಮುಂದುವರಿಸಿದ್ದು, ಉಡುಪಿ ಎಸ್.ಪಿ ಮಾಲ್ವಾನ್ ಹಾಗೂ ಮಹಾರಾಷ್ಟ್ರದ ದೇವಘಡ ಎಸ್.ಪಿ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಅಲ್ಲಿನ ಮೀನುಗಾರ ಸಂಘಗಳಿಂದ ಸ್ಥಳೀಯ ಪೊಲೀಸ್ ಠಾಣೆಯ ಮೂಲಕ ಮಾಹಿತಿಯನ್ನು ಕೂಡ ಕಲೆ ಹಾಕುತ್ತಿದ್ದಾರೆ.