LATEST NEWS
ಶಬರಿಮಲೆ ಪ್ರವೇಶಿಸಲು ಯತ್ನಿಸಿದ್ದ ಇಬ್ಬರು ಮಹಿಳೆಯರು ವಾಪಾಸ್ ಕಳುಹಿಸಿದ ಪೊಲೀಸರು
ಶಬರಿಮಲೆ ಪ್ರವೇಶಿಸಲು ಯತ್ನಿಸಿದ್ದ ಇಬ್ಬರು ಮಹಿಳೆಯರು ವಾಪಾಸ್ ಕಳುಹಿಸಿದ ಪೊಲೀಸರು
ಕೇರಳ ಜನವರಿ 16: ಮಕರ ಸಂಕ್ರಾತಿಯ ನಂತರ ಶಬರಿಮಲೆ ದೇಗುಲ ಪ್ರವೇಶಿಸಲು ಯತ್ನಿಸಿದ್ದ ಇಬ್ಬರು ಸಿಪಿಎಂ ಮಹಿಳಾ ಕಾರ್ಯಕರ್ತರನ್ನು ಪೊಲೀಸರು ಬಲವಂತವಾಗಿ ವಾಪಸ್ ಕಳುಹಿಸಿದ್ದಾರೆ.
ರೇಷ್ಮಾ ಮತ್ತು ಶಾನಿಲಾ ಎಂಬ 30ರ ಆಸುಪಾಸಿನ ಇಬ್ಬರು ಮಹಿಳೆಯರು ಇಂದು ಶಬರಿಮಲೆ ದೇವಸ್ಥಾನಕ್ಕೆ ಪ್ರವೇಶಕ್ಕೆ ಯತ್ನಿಸಿದ್ದರು. ಈ ಇಬ್ಬರು ಕಣ್ಣೂರು ಜಿಲ್ಲೆಯವರಾಗಿದ್ದು, ಇಬ್ಬರು ಸಿಪಿಎಂ ಕಾರ್ಯಕರ್ತರು ಎಂದು ಜನಮ್ ಟಿವಿ ವರದಿ ಮಾಡಿದೆ.
ಕಣ್ಣೂರು -ಕೋಯಿಕ್ಕೋಡ್ ನಿಂದ ಬಂದ ಎಂಟು ಅಯ್ಯಪ್ಪ ಭಕ್ತರು ತಂಡದಲ್ಲಿ ಈ 30ರ ಆಸುಪಾಸಿನ ವಯಸ್ಸಿನ ಇಬ್ಬರು ಮಹಿಳೆಯರು ಇದ್ದರು. ಬುಧವಾರ ಮುಂಜಾನೆ ಶಬರಿಮಲೆಯೇರಿದ್ದರು.
ಆದರೆ ಪ್ರತಿಭಟನಾಕಾರರು ನೀಲಮಲೆ ಬಳಿ ಆ ತಂಡದಲ್ಲಿದ್ದ ಮಹಿಳೆಯರಿಗೆ ತಡೆಯೊಡ್ಡಿದ್ದಾರೆ. ಮೊದಮೊದಲು ಐದು ಮಂದಿ ಈ ಮಹಿಳೆಯರ ವಿರುದ್ಧ ಶರಣಂ ಕೂಗಿ ಪ್ರತಿಭಟನೆ ನಡೆಸಿದ್ದು, ಆನಂತರ ಪ್ರತಿಭಟನಾಕಾರರ ಸಂಖ್ಯೆ ಹೆಚ್ಚಾಯಿತು.
ಆದರೆ ಮಹಿಳೆಯರು ತಾವು ಅಯ್ಯಪ್ಪ ದರ್ಶನ ಪಡೆದೇ ತೀರುತ್ತೇವೆ ಎಂದು ಹಠ ಹಿಡಿದು ನಿಂತರು. ಮೊದಲು ಪ್ರತಿಭಟನೆ ನಡೆಸಿದ ಐದು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ತೆರವು ಮಾಡಿದ್ದರೂ ನಂತರ ಜನರು ಗುಂಪಾಗಿ ಪ್ರತಿಭಟನೆ ಆರಂಭಿಸಿದರು.
ಮೂರು ಗಂಟೆಗಳ ನಂತರ ಪ್ರತಿಭಟನಾಕಾರರು ಪಟ್ಟು ಸಡಿಲಿಸದೇ ಇದ್ದಾಗ ಪೊಲೀಸರು ಬಲವಂತವಾಗಿ ರೇಷ್ಮಾ ಮತ್ತು ಶಾನಿಲಾಳನ್ನು ವಾಪಸ್ ಹೋಗುವಂತೆ ಹೇಳಿದ್ದಾರೆ.