LATEST NEWS
ದೀಪಕ್ ರಾವ್ ಹತ್ಯೆ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಗಳ ಮೇಲೆ ಪೊಲೀಸ್ ಪೈರಿಂಗ್
ದೀಪಕ್ ರಾವ್ ಹತ್ಯೆ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಗಳ ಮೇಲೆ ಪೊಲೀಸ್ ಪೈರಿಂಗ್
ಮಂಗಳೂರು ಜನವರಿ 3: ಮಂಗಳೂರು ಹೊರವಲಯದ ಕಾಟಿಪಳ್ಳದಲ್ಲಿ ಹಾಡು ಹಗಲೇ ನಡೆದ ಹಿಂದೂ ಸಂಘಟನೆಯ ಕಾರ್ಯಕರ್ತನ ಹತ್ಯೆ ಪ್ರಕರಣ ಭೇದಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಹತ್ಯೆ ನಡೆಸಿ ಕಾರಿನಲ್ಲಿ ಪರಾರಿಯಾಗುತ್ತಿದ್ದ ದುಷ್ಕರ್ಮಿಗಳನ್ನ ಸುರತ್ಕಲ್ ಹಾಗೂ ಮುಲ್ಕಿ ಠಾಣೆಯ ಪೊಲೀಸರ ತಂಡ ಬೆನ್ನಟ್ಟಿದೆ. ಮುಲ್ಕಿ ಮೂಡಬಿದಿರೆ ಮಾರ್ಗವಾಗಿ ಅತೀ ವೇಗವಾಗಿ ಸಾಗುತ್ತಿದ್ದ ದುಷ್ಕರ್ಮಿಗಳ ಸ್ವಿಪ್ಟ್ ಕಾರನ್ನ ಪೊಲೀಸರ ಕಂಡ ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿದೆ.
ಒಂದು ಹಂತದಲ್ಲಿ ಪರಾರಿಯಾಗಲು ದುಷ್ಕರ್ಮಿಗಳು ಯತ್ನಿಸಿದ್ದರು ಆದರೆ ಪೊಲೀಸರ ತಂಡ ಜೀವದ ಹಂಗು ತೊರೆದು ಕಾರನ್ನು ಚೇಸ್ ಮಾಡಿದೆ. ದುಷ್ಕರ್ಮಿಗಳನ್ನು ತಡೆಯಲು ಎಷ್ಟೇ ಪ್ರಯತ್ನ ಪಟ್ಟರು ದುಷ್ಕರ್ಮಿಗಳು ಕಾರನ್ನು ನಿಲ್ಲಿಸದೇ ಪರಾರಿಯಾಗಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಮುಲ್ಕಿ ಠಾಣೆಯ ಸಬ್ ಇನ್ಸ್ ಪೆಕ್ಟರ್ ಶೀತಲ್ ಅಲಗುರು ದುಷ್ಕರ್ಮಿಗಳ ಕಾರಿನ ಮೇಲೆ ಗುಂಡುಹಾರಿಸಿದ್ದಾರೆ.
ಈ ಸಂದರ್ಭದಲ್ಲಿ ಕಾರನ್ನು ನಿಲ್ಲಿಸಿ ಪರಾರಿಯಾಗಲು ಯತ್ನಿಸಿದ ನಾಲ್ವರು ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕಾಟಿಪಳ್ಳದ ಇರ್ಶಾದ್, ಕಿನ್ನಿಗೋಳಿ ನೌಷಾದ್, ಕಾಟಿಪಳ್ಳ ನವಾಜ್ ಯಾನೆ ಪಿಂಕಿ ನವಾಜ್, ಕಾಟಿಪಳ್ಳ ರಿಜ್ವಾನ್ ಎಂದು ಗುರುತಿಸಲಾಗಿದೆ. ಇತ್ತೀಚೆಗೆ ಕಾಟಿಪಳ್ಳದ ಗಣೇಶ್ ಪುರದಲ್ಲಿ ನಡೆದ ಬಂಟಿಂಗ್ಸ್ ಫ್ಲೆಕ್ಸ್ ವಿವಾದ ಈ ಹತ್ಯೆಗೆ ಕಾರಣ ಎಂದು ಹೇಳಲಾಗಿದೆ.
ನಾಲ್ವರು ಆರೋಪಿಗಳ ಬಂಧನ ಸಂದರ್ಭದಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಇಬ್ಬರು ಆರೋಪಿಗಳ ಮೇಲೆ ಪೊಲೀಸರು ಪೈರಿಂಗ್ ಮಾಡಿದ್ದಾರೆ, ಆರೋಪಿಗಳಾದ ರಿಜ್ವಾನ್, ಪಿಂಕಿ ನವಾಜ್ ಮೇಲೆ ಫೈರಿಂಗ್ ಸಿಸಿಬಿ ಪೊಲೀಸರ ಮಾಡಿದ್ದಾರೆ.
ಪೈರಿಂಗ್ ನಲ್ಲಿ ಗಾಯಗೊಂಡಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳಲ್ಲಿ ರಿಜ್ವಾನ್ ಟಾರ್ಗೆಟ್ ಗ್ಯಾಂಗ್ ಲೀಡರ್ ಸಫ್ವಾನ್ ಸಹಚರ ನಾಗಿದ್ದು 15ಕ್ಕೂ ಹೆಚ್ಚು ಪ್ರಕರಣಗಳನ್ನು ಎದುರಿಸುತ್ತಿದ್ದಾನೆ.