DAKSHINA KANNADA
“ಪೊಲೀಸ್ ಕಮೀಷನರ್ ವರ್ಗಾವಣೆ – ಡ್ರಗ್ಸ್ ವಿರುದ್ದದ ಹೋರಾಟದಲ್ಲಿ ಪೊಲೀಸರ ನೈತಿಕ ಸ್ಥೈರ್ಯಕ್ಕೆ ಹೊಡೆತ “.!

ಮಂಗಳೂರು ನಗರದಲ್ಲಿ ವ್ಯಾಪಕವಾಗಿ ಜಾಲ ಹರಡಿದ್ದ ಮಾದಕ ವಸ್ತುಗಳ ಮಾರಾಟ,ಸೇವನೆ,ಡ್ರಗ್ಸ್ ಪೆಡ್ಲರ್ ಗಳ ಅಟ್ಟಹಾಸವನ್ನು ಸಮಪರ್ಕವಾಗಿ ನಿಗ್ರಹಿಸಿ ನಗರವನ್ನು ಕಾನೂನು ಅಸ್ತ್ರ ಸ್ವಚ್ಚಮಾಡುತ್ತಿದ್ದ ಪೊಲೀಸ್ ಕಮೀಷನರ್ ಕುಲ ದೀಪ್ ಜೈನ್ ಅವರ ವರ್ಗಾವಣೆಯಿಂದ ಪೊಲೀಸ್ ಇಲಾಖೆಯ ನೈತಿಕ ಸ್ಥೈರ್ಯಕ್ಕೆ ಹೊಡೆತ ನೀಡಲಾಗಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಕಿಡಿ ಕಾರಿದ್ದಾರೆ.
ಮಂಗಳೂರು: ಮಂಗಳೂರು ನಗರದಲ್ಲಿ ವ್ಯಾಪಕವಾಗಿ ಜಾಲ ಹರಡಿದ್ದ ಮಾದಕ ವಸ್ತುಗಳ ಮಾರಾಟ,ಸೇವನೆ,ಡ್ರಗ್ಸ್ ಪೆಡ್ಲರ್ ಗಳ ಅಟ್ಟಹಾಸವನ್ನು ಸಮಪರ್ಕವಾಗಿ ನಿಗ್ರಹಿಸಿ ನಗರವನ್ನು ಕಾನೂನು ಅಸ್ತ್ರ ಸ್ವಚ್ಚಮಾಡುತ್ತಿದ್ದ ಪೊಲೀಸ್ ಕಮೀಷನರ್ ಕುಲ ದೀಪ್ ಜೈನ್ ಅವರ ವರ್ಗಾವಣೆಯಿಂದ ಪೊಲೀಸ್ ಇಲಾಖೆಯ ನೈತಿಕ ಸ್ಥೈರ್ಯಕ್ಕೆ ಹೊಡೆತ ನೀಡಲಾಗಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಕಿಡಿ ಕಾರಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಡಾ. ಭರತ್ ಶೆಟ್ಟಿ ನಮ್ಮ ಜಿಲ್ಲೆಯ ಮಕ್ಕಳು ದುಶ್ಚಟಗಳಿಗೆ ಬಲಿಯಾಗಬಾರದು ಎನ್ನುವ ಸಂಕಲ್ಪದೊಂದಿಗೆ ಹೋರಾಡುತ್ತಿದ್ದ ಕಮೀಷನರ್ ಅವರ ವರ್ಗಾವಣೆ ಮಾಡಿ ಕಾಂಗ್ರೆಸ್ ಏನು ಸಾಧಿಸಿತು.
ಅಕ್ರಮ ಚಟುವಟಿಕೆಗೆ ಪರೋಕ್ಷವಾಗಿ ಆಡಳಿತ ಪಕ್ಷ ಕುಮ್ಮಕ್ಕು ನೀಡುವಂತೆ ಕಾಣುತ್ತಿದೆ.
ಮುಂದಿನ ದಿನಗಳಲ್ಲಿ ಮತ್ತೆ ಮಾದಕ ವಸ್ತುಗಳ ಜಾಲ ತಲೆ ಎತ್ತಿ ಮಕ್ಕಳ ಭವಿಷ್ಯ ಹಾಳಾದರೆ ಕಾಂಗ್ರೆಸ್ ಹೊಣೆ ಹೊರಬೇಕು ಎಂದು ಎಚ್ಚರಿಸಿರುವ ಶಾಸಕರು,ಹೊಸ ಕಮೀಷನರ್ ಅವರಿಗಾದರೂ ಪೂರ್ಣ ಸ್ವಾತಂತ್ರ್ಯ ನೀಡಿ ಈ ಹೋರಾಟ ಮುಂದುವರಿಸಲು ಎಲ್ಲಾ ಅವಕಾಶ ಕಲ್ಪಿಸಬೇಕು.
ಇಲ್ಲದಿದ್ದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಈ ಅನ್ಯಾಯದ ವಿರುದ್ದ ಹೋರಾಟ ಮಾಡಲಾಗುವುದು ಎಂದು ಹೇಳಿದ್ದಾರೆ.