LATEST NEWS
ಮಂಗಳೂರು ಗಲಭೆಯಲ್ಲಿ ಶಾಂತಿ ಕಾಪಾಡಲು ಶ್ರಮಿಸಿದ ಪೊಲೀಸರಿಗೆ 10 ಲಕ್ಷ ನಗದು ಪುರಸ್ಕಾರ

ಮಂಗಳೂರು ಗಲಭೆಯಲ್ಲಿ ಶಾಂತಿ ಕಾಪಾಡಲು ಶ್ರಮಿಸಿದ ಪೊಲೀಸರಿಗೆ 10 ಲಕ್ಷ ನಗದು ಪುರಸ್ಕಾರ
ಮಂಗಳೂರು ಡಿಸೆಂಬರ್ 26: ಮಂಗಳೂರಿನಲ್ಲಿ ಪೌರತ್ವ ಕಾಯಿದೆ ವಿರೋಧಿಸಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಶ್ರಮಿಸಿದ ಪೋಲೀಸರಿಗೆ ಮಂಗಳೂರು ಪೋಲೀಸ್ ಕಮಿಷನರ್ 10 ಲಕ್ಷ ರೂಪಾಯಿಗಳ ನಗದು ಬಹುಮಾನ ಘೋಷಿಸಿದ್ದಾರೆ ಎಂಬ ನಕಲಿ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆದರೆ, ಇದೊಂದು ನಕಲಿ ಪತ್ರವಾಗಿದ್ದು, ಕಿಡಿಗೇಡಿಗಳು ಇಂತಹ ಕೃತ್ಯ ಮಾಡುತ್ತಿದ್ದಾರೆ. ಸಾರ್ವಜನಿಕರು ಇಂತಹ ವದಂತಿಗಳಿಗೆ ಕಿವಿಗೊಡಬಾರದು ಎಂದು ಪೊಲೀಸ್ ಆಯುಕ್ತ ಡಾ. ಹರ್ಷ ಸ್ಪಷ್ಟಪಡಿಸಿದ್ದಾರೆ. 148 ಜನರಿಗೆ ಒಟ್ಟು 10 ಲಕ್ಷ ರೂಪಾಯಿ ಬಹುಮಾನ ನೀಡಲಾಗಿದೆ ಎಂದು ಹೇಳಿರುವ ಈ ಪತ್ರದಲ್ಲಿ ಆದೇಶ ಸಂಖ್ಯೆಯಾಗಲಿ, ಅಧಿಕೃತ ಅಧಿಕಾರಿಯ ಸಹಿಯಾಗಲಿ ಇಲ್ಲ. ಹೀಗಾಗಿ ಇದೊಂದು ನಕಲಿ ಪತ್ರ ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ ವೈರಲ್ ಆಗಿರುವ ಪತ್ರದಲ್ಲಿರುವ ಎಲ್ಲಾ 148 ಪೊಲೀಸ್ ಅವರ ಹೆಸರುಗಳು ಅಸಲಿ ಎಂದು ತಿಳಿದು ಬಂದಿದ್ದು, 148 ಮಂದಿಯ ಪೂರ್ತಿ ಮಾಹಿತಿ ಪೊಲೀಸ್ ಇಲಾಖೆ ಬಿಟ್ಟರೆ ಜನಸಾಮಾನ್ಯರ ಕೈಗೆ ಸಿಗುವುದು ಕಷ್ಟಸಾಧ್ಯ. ನಕಲಿ ಪತ್ರ ಸೃಷ್ಠಿಸುವವರಿಗೆ ಇಷ್ಟು ಕರಾರುವಕ್ಕಾಗಿ ಮಾಹಿತಿ ಹೇಗೆ ಸಿಕ್ಕಿದೆ ಎನ್ನುವುದು ತನಿಖೆಯಿಂದ ತಿಳಿದು ಬರಬೇಕಾಗಿದೆ.