DAKSHINA KANNADA
ಪುತ್ತೂರು – ಯುವಕನ ಮೇಲೆ ವಿನಾಕಾರಣ ಪೊಲೀಸರಿಂದ ಹಲ್ಲೆ ಆರೋಪ – ಗಾಯಾಳು ಆಸ್ಪತ್ರೆಗೆ ದಾಖಲು

ಪುತ್ತೂರು ಜುಲೈ 29: ಯುವಕನ ಮೇಲೆ ಪೊಲೀಸರು ವಿನಾಕಾರಣ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದ್ದು, ಇದೀಗ ಹಲ್ಲೆಗೊಳಗಾದ ಯುವಕ ಆಸ್ಪತ್ರೆ ದಾಖಲಾಗಿದ ಘಟನೆ ಈಶ್ವಮಂಗಲ ಪಂಚೋಡಿಯಲ್ಲಿ ಜುಲೈ 27ರಂದು ನಡೆದಿದೆ.
ಈಶ್ವರಮಂಗಲ ಪಂಚೋಡಿ ನಿವಾಸಿ ಪುತ್ತೂರು ಕಂಪೆನಿಯೊಂದರಲ್ಲಿ ಎಸಿ ಟೆಕ್ನಿಷಿಯನ್ ಆಗಿರುವ ಭ್ರಮೀಷ್ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳು. ಭ್ರಮೀಷ್ ಅವರ ಎಡ ಕೈಗೆ ಗಾಯವಾಗಿದೆ.

ಜುಲೈ 27 ರಂದು ಪೊಲೀಸರು ಯುವಕನ ಮನೆ ಬಂದಿದ್ದು, ಮನೆಯಲ್ಲಿದ್ದ ಯುವಕನನ್ನು ಹೊರಗೆ ಎಳೆದು ನಾಲ್ವರು ಪೊಲೀಸರು ವಿನಾಕಾರಣ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆ ನಡೆಸಿದ ಪೊಲೀಸರು ಬಳಿಕ ಪೊಲೀಸ್ ಎಸ್ಐ ಹತ್ತಿರ ಕರೆದುಕೊಂಡು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಎಸ್ ಐ ನೀನು ಹೋಗು ಎಂದು ಕಳುಹಿಸಿದ್ದಾರೆ ಎಂದು ಯುವಕ ತಿಳಿಸಿದ್ದಾನೆ. ಆದರೆ ನಾಲ್ವರು ಪೊಲೀಸರು ನನಗೆ ಹಲ್ಲೆ ಮಾಡಿದ ಕಾರಣ ನನ್ನ ಕೈಗೆ ಗಾಯವಾಗಿದ್ದು, ಆಸ್ಪತ್ರೆ ದಾಖಲಾಗಿದ್ದೆನೆ ಎಂದು ಯುವಕ ತಿಳಿಸಿದ್ದಾನೆ.
ಪಂಚೋಡಿ ವೈನ್ ಶಾಪ್ ಬಳಿ ಗಲಾಟೆ ನಡೆದಿತ್ತು. ಆದರೆ ನನಗೆ ಈ ವಿಚಾರ ಗೊತ್ತಿರಲಿಲ್ಲ. ನಾನು ಮನೆಯಲ್ಲಿದ್ದೆ. ಪೊಲೀಸರು ನನ್ನನ್ನು ಅದೇ ವಿಚಾರದಲ್ಲಿ ತಪ್ಪು ಮಾಹಿತಿಯಿಂದ ನನಗೆ ಹಲ್ಲೆ ನಡೆಸಿದ್ದಾರೆ. ಆದರೆ ವಿಚಾರಣೆ ಮಾಡಬಹುದಿತ್ತು. ಅದನ್ನು ಮಾಡದೆ ಯಾವುದೇ ಮಾಹಿತಿ ಪಡೆಯದೇ ಏಕಾಏಕಿ ಹಲ್ಲೆ ನಡೆಸಿದ್ದಾರೆ ಎಂದು ಭ್ರಮೀಷ್ ಅವರು ಆರೋಪಿಸಿದ್ದಾರೆ. ಕತ್ತಿಯಿಂದ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಕುರಿತು ವರದಿಯಾಗಿದೆ. ಪೊಲೀಸರಿಂದ ವ್ಯಕ್ತಿಗೆ ಹಲ್ಲೆ ಘಟನೆ ಮಾಹಿತಿಯಿಲ್ಲ ಎಂದು ಪೊಲೀಸ್ ಮಾಹಿತಿ ಲಭ್ಯವಾಗಿದೆ.