LATEST NEWS
ಕೊರಗರ ಮೇಲೆ ಹಲ್ಲೆ ಪ್ರಕರಣ – ಕೋಟ ಪಿಎಸ್ಐ ಸೇರಿದಂತೆ ಐವರು ಸಿಬ್ಬಂದಿಗಳನ್ನು ಠಾಣೆಯಿಂದ ಸ್ಥಳಾಂತರ

ಕೋಟ ಡಿಸೆಂಬರ್ 28: ಕೊರಗ ಸಮುದಾಯದ ಮೆಹಂದಿ ಕಾರ್ಯಕ್ರಮಕ್ಕೆ ನುಗ್ಗಿ ಅಲ್ಲಿದ್ದ ಮಹಿಳೆ ಮತ್ತು ಮಕ್ಕಳು ಸೇರಿದಂತೆ ಎಲ್ಲರ ಮೇಲೆ ಲಾಠಿ ಬೀಸಿ ದರ್ಪ ಮೆರೆದಿದ್ದ ಪೊಲೀಸ್ ಸಿಬ್ಬಂದಿಗಳನ್ನು ಇದೀಗ ಸ್ಥಳಾಂತರಿಸಲಾಗಿದ್ದು, ಕೋಟ ಪಿಎಸ್ಐ ಸೇರಿದೆತ 5 ಮಂದಿ ಸಿಬ್ಬಂದಿಗಳನ್ನು ಮುಂದಿನ ಆದೇಶದವರೆಗೆ ಠಾಣೆಯಿಂದ ಎತ್ತಂಗಡಿ ಮಾಡಲಾಗಿದೆ.
ಭಾರಿ ವಿವಾದ ಸೃಷ್ಠಿಸಿದ್ದ ಘಟನೆಯ ಕುರಿತು ಮಾಹಿತಿ ನೀಡಿದ ಉಡುಪಿ ಎಸ್ಪಿ ವಿಷ್ಣುವರ್ಧನ್ ಘಟನೆಯ ಮಾಹಿತಿ ಬಂದ ಬಳಿಕ ಠಾಣಾಧಿಕಾರಿ ಹಾಗೂ ಐವರು ಸಿಬ್ಬಂದಿಯನ್ನು ಅಲ್ಲಿಂದ ಸ್ಥಳಾಂತರಿಸಿದ್ದು, ತನಿಖೆ ಮುಗಿದು, ಮುಂದಿನ ನಿರ್ಧಾರ ಕೈಗೊಳ್ಳುವವರೆಗೆ ಅವರು ಜಿಲ್ಲಾಪೊಲೀಸ್ ಕಚೇರಿಯಲ್ಲಿರುವರು ಎಂದರು.

ಉಡುಪಿ ವಿಭಾ ಗ ಡಿವೈಎಸ್ಪಿ ಸುಧಾಕರ್ ಅವರು ಘಟನೆಯ ಕುರಿತು ಸಮಗ್ರ ತನಿಖೆ ನಡೆಸುತಿದ್ದು, ನಾಳೆ ಸಂಜೆಯೊಳಗೆ ವರದಿ ನೀಡುವಂತೆ ಅವರಿಗೆ ತಿಳಿಸಲಾಗಿದೆ. ಈ ವರದಿಯನ್ನು ತಾನು ಪಶ್ಚಿಮ ವಲಯ ಐಜಿಪಿ ಅವರಿಗೆ ಒಪ್ಪಿಸಲಿದ್ದು, ಅವರು ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಿದ್ದಾರೆ ಎಂದರು.
https://youtu.be/LXltygSAjWE