Connect with us

LATEST NEWS

ಶಾಂತಿ ಕದಡಲು ನಾಗಬನಗಳ ಧ್ವಂಸ ಮಾಡಿದ 8 ಮಂದಿ ಆರೋಪಿಗಳು ಆರೆಸ್ಟ್

ಮಂಗಳೂರು: ಮಂಗಳೂರಿನ ಕೂಳೂರು ಮತ್ತು ಕೋಡಿಕಲ್ ನಾಗಬನಗಳ ಕಲ್ಲುಗಳನ್ನು ಭಗ್ನಗೊಳಿಸಿ ಕೋಮು ಸೌಹಾರ್ದತೆ ಕದಡಲು ಸಂಚು ರೂಪಿಸಿದ್ದ 8 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.


ಬಂಧಿತರನ್ನು ಕಾವೂರಿನ ಸಫ್ವಾನ್, ಪ್ರವೀಣ್ ಅನಿಲ್ ಮೊಂತೇರೊ, ಸೊಹೈಲ್, ನಿಖಿಲೇಶ್, ಜಯಕುಮಾರ್, ಪ್ರತೀಕ್, ಮಂಜುನಾಥ್ ಮತ್ತು ನೌಷಾದ್ ಬಂಧಿತ ಎಂದು ಗುರುತಿಸಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಈ ಕುರಿತಂತೆ ಮಾಹಿತಿ ನೀಡಿದ ಅವರು ಸರ ಕಳವು ಪ್ರಕರಣದಲ್ಲಿ ಈಗಾಗಲೇ ಬಂಧಿತರಾಗಿದ್ದು ಜಾಮೀನು ಪಡೆದು ಹೊರ ಬಂದಿರುವ ಇರ್ಷಾದ್ ಮತ್ತು ಅಚ್ಚಿ ಎಂಬ ಆರೋಪಿಗಳು ಪ್ರಕರಣದ ಮೂಲ ಸೂತ್ರದಾರರು.


ಪೊಲೀಸರು ಕಳವು ಪ್ರಕರಣಗಳನ್ನು ತಡೆಯಲು ನಡೆಸಿದ್ದ ಕಾರ್ಯ ಚಟುವಟಿಕೆಗಳನ್ನು ಬೇರೆ ಕಡೆಗೆ ಸೆಳೆಯುವ ಪ್ರಯತ್ನ ಈ ಕೃತ್ಯಕ್ಗೆ ಕಾರಣವಾಗಿದೆ. ಪೊಲೀಸರ ಗಮನ ಬೇರಡೆ ಸೆಳೆಯಲು ಸಂಚು ರೂಪಿಸಿದ್ದರು. ಇದನ್ನು ತಮ್ಮ ಬಳಗದ ಸಫ್ವಾನ್ ಕಾವೂರು ಗಮನಕ್ಕೆ ತಂದಿದ್ದರು. ಸಫ್ವಾನ್ ತಂಡದವರು ಸೇರಿಕೊಂಡು ಧಾರ್ಮಿಕ ಕೇಂದ್ರಗಳನ್ನು ಅಪವಿತ್ರಗೊಳಿಸಿದರೆ ಪೊಲೀಸರ ಗಮನ ಆ ಕಡೆ ಹೋಗುತ್ತೆ ಎಂದು ನಾಗಬನ ಧ್ವಂಸ ಕೃತ್ಯ ನಡೆಸಿದ್ದಾರೆ. ಈ ಘಟನೆ ನಡೆದ ಬಳಿಕ ಹಿಂದೂ ಸಂಘಟನಗೆಳಿಂದ ಭಾರೀ ಅಕ್ರೋಶ ವ್ಯಕ್ತವಾಗಿತ್ತು, ಅಲ್ಲದೆ ಪ್ರತಿಭಟನೆಗಳು ನಡೆದಿದ್ದವು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *