Connect with us

DAKSHINA KANNADA

ಡಿಸಿಗಲ್ಲ ಅಪ್ಪನಿಗೆ ಹೇಳು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಪೋಲೀಸಪ್ಪನ ಉದ್ಧಟತನ

ಡಿಸಿ ಅಲ್ಲ ಅವರಪ್ಪನಿಗೆ ಹೇಳು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಪೋಲೀಸಪ್ಪನ ಉದ್ಧಟತನ

ಪುತ್ತೂರು, ಸೆಪ್ಟಂಬರ್ 1:ರಾಷ್ಟ್ರೀಯ ಹೆದ್ದಾರಿ 75 ರ ಶಿರಾಢಿಘಾಟ್ ರಸ್ತೆಯಲ್ಲಿ ಎಲ್ಲಾ ತರಹದ ವಾಹನಗಳ ಸಂಚಾರವನ್ನು ನಿಶೇಧಿಸಲಾಗಿದ್ದರೂ, ಸಕಲೇಶಪುರ ಕಡೆಯಿಂದ ವಾಹನಗಳು ಮಾತ್ರ ನಿರಂತರವಾಗಿ ಗುಂಡ್ಯಾ ಕಡೆಗೆ ಬರುತ್ತಿದೆ.

ಈ ರೀತಿ ಬರುತ್ತಿರುವ ವಾಹನಗಳಿಂದ ಗುಂಡ್ಯಾ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿರುವ ಪೋಲೀಸರು ಹಣ ವಸೂಲಿ ಮಾಡುತ್ತಿರುವುದಾಗಿ ಆರೋಪಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಎರಡು ದಿನಗಳ ಹಿಂದೆ ಈ ವಿಡಿಯೋ ಮಾಡಲಾಗಿದ್ದು, ಕಳೆದ 15 ದಿನಗಳಿಂದ ಘಾಟ್ ರಸ್ತೆ ಬಂದ್ ಎನ್ನುವ ಕಾರಣಕ್ಕೆ ಗುಂಡ್ಯಾದಲ್ಲೇ ಬೀಡು ಬಿಟ್ಟಿದ್ದ ಭಾರೀ ಗಾತ್ರದ ವಾಹನ ಚಾಲಕರೇ ಈ ವಿಡಿಯೋವನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಿದ್ದಾರೆ.

ಗುಂಡ್ಯಾ ಭಾಗದಿಂದ ಯಾವುದೇ ವಾಹನಗಳನ್ನು ಬಿಡದ ಪೋಲೀಸರು, ಸಕಲೇಶಪುರ ಕಡೆಯಿಂದ ಬರುವ ವಾಹನಗಳನ್ನು ಮಾಮೂಲಿ ಪಡೆದು ಬಿಡುತ್ತಿದ್ದಾರೆ ಎನ್ನುವ ಆರೋಪವನ್ನು ವಿಡಿಯೋ ಮೂಲಕ ತೋರಿಸಲಾಗಿದೆ.

ಅಲ್ಲದೆ ಈ ಬಗ್ಗೆ ಪೋಲೀಸರಲ್ಲಿ ಪ್ರಶ್ನಿಸಿದಾಗ ಪೋಲೀಸ್ ಮಹಾಶಯನೊಬ್ಬ ಉಡಾಫೆಯ ಉತ್ತರವನ್ನೂ ನೀಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ವಿಡಿಯೋ ಮಾಡುತ್ತಿರುವ ಲಾರಿ ಚಾಲಕ ಹಣ ಪಡೆದು ವಾಹನಗಳನ್ನು ಬಿಡುತ್ತಿರುವ ಬಗ್ಗೆ ದಕ್ಷಿಣಕನ್ನಡ ಜಿಲ್ಲಾಧಿಕಾರಿಗಳಿಗೆ ದೂರು ನೀಡುವುದಾಗಿ ಹೇಳುತ್ತಿರುವ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಪೋಲೀಸ್ ಡಿಸಿ ಗಲ್ಲಾ , ಅಪ್ಪನಿಗೂ ಹೇಳು ಎನ್ನುವ ಉದ್ಧಟತನ ಪ್ರದರ್ಶಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಹಣ, ಅಧಿಕಾರ ಇದ್ದವನಿಗೆ ಒಂದು ಕಾನೂನು, ಎರಡೂ ಇಲ್ಲದವನಿಗೆ ಇನ್ನೊಂದು ಕಾನೂನು ಎನ್ನುವ ಧೋರಣೆ ಈ ವಿಡಿಯೋ ಮೂಲಕ ಬಹಿರಂಗೊಂಡಿದೆ.

ವಿಡಿಯೋಗಾಗಿ ಇಲ್ಲಿ ನೋಡಿ…

Share Information
Continue Reading
Advertisement
Click to comment

Leave a Reply

Your email address will not be published. Required fields are marked *