LATEST NEWS
ಪ್ರಧಾನಿ ಮೋದಿ ಇಟ್ಟ ಹೆಸರು ಅಪರೇಷನ್ ಸಿಂಧೂರ

ನವದೆಹಲಿ ಮೇ 07: ಕಾಶ್ಮೀರದ ಪೆಹಲ್ಗಾಮ್ ನಲ್ಲಿ ಅಮಾಯಕ ಪ್ರವಾಸಿಗರನ್ನು ಹತ್ಯೆ ಮಾಡಿದ್ದ ಉಗ್ರರ ವಿರುದ್ದ ಪ್ರತೀಕಾರವಾಗಿ ಭಾರತೀಯ ಸೇನೆ ಇಂದು ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದೆ. ಈ ಕಾರ್ಯಾಚರಣೆಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಹೆಸರಿಟ್ಟಿದ್ದರು ಎಂದು ಇದೀಗ ವರದಿಯಾಗಿದೆ. ಪಾಕಿಸ್ತಾನದ ಉಗ್ರರ ನೆಲೆಗಳ ಮೇಲಿನ ದಾಳಿಗೆ ಅಪರೇಷನ್ ಸಿಂಧೂರ ಎಂದು ಹೆಸರಿಡಲಾಗಿತ್ತು. ಈ ಹೆಸರು ಆಯ್ಕೆ ಮಾಡಿರುವುದು ಪ್ರಧಾನಿ ನರೇಂದ್ರ ಮೋದಿಯವರು ಎಂದು ಸರ್ಕಾರ ಮೂಲಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಹಿಂದೂ ಮಹಿಳೆಯರು ಮದುವೆಯಾದ ಬಳಿಕ ಹಣೆಗೆ ಸಿಂಧೂರ ಇಟ್ಟುಕೊಳ್ಳುತ್ತಾರೆ. ಉಗ್ರರು ಪಹಲ್ಗಾಮ್ ದಾಳಿ ವೇಳೆ ಗುಂಡು ಹಾರಿಸುವ ಮೊದಲು ಹೆಸರು, ಧರ್ಮವನ್ನು ಕೇಳಿದ್ದಾರೆ. ಹಿಂದೂ ಎಂದ ತಕ್ಷಣ ಗುಂಡು ಹಾರಿಸಿದ್ದಾರೆ ಎಂದು ಮೃತರ ಸಂಬಂಧಿಗಳು ಹೇಳಿದ್ದರು. ಇದಕ್ಕೆ ಅನುಸಾರವಾಗಿ ಭಾರತೀಯ ಹೆಣ್ಣುಮಕ್ಕಳ ಸಿಂಧೂರವನ್ನು ಅಳಿಸಿದವರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಸರ್ಕಾರ ‘ಅಪರೇಷನ್ ಸಿಂಧೂರ’ ಎಂದು ಕಾರ್ಯಾಚರಣೆಗೆ ನಾಮಕರಣ ಮಾಡಿದೆ ಎಂದು ಹಲವು ವರದಿಗಳು ತಿಳಿಸಿವೆ.

ಅಲ್ಲದೆ ಭಾರತೀಯ ಸೇನೆ ಬಿಡುಗಡೆ ಮಾಡಿದ ಲೋಗೋದಲ್ಲಿಯೂ ಅಪರೇಷನ್ ಸಿಂಧೂರ ಎಂದು ದಪ್ಪ ಅಕ್ಷರಗಳಲ್ಲಿ ಬರೆಯಲಾಗಿದೆ. ಜತೆಗೆ ಸಿಂಧೂರ ಪದದ ನಡುವೆ ಬಟ್ಟಲಿನಲ್ಲಿರುವ ಕುಂಕುಮ ಸಿಡಿದಿರುವ ರೀತಿಯಲ್ಲಿ ಚಿತ್ರಿಸಲಾಗಿದೆ. ಅಲ್ಲದೆ ಭಾರತೀಯ ಸೇನೆ ಬಿಡುಗಡೆ ಮಾಡಿದ ಲೋಗೋದಲ್ಲಿಯೂ ಆಪರೇಷನ್ ಸಿಂಧೂರ ಎಂದು ದಪ್ಪ ಅಕ್ಷರಗಳಲ್ಲಿ ಬರೆಯಲಾಗಿದೆ. ಜತೆಗೆ ಸಿಂಧೂರ ಪದದ ನಡುವೆ ಬಟ್ಟಲಿನಲ್ಲಿರುವ ಕುಂಕುಮ ಸಿಡಿದಿರುವ ರೀತಿಯಲ್ಲಿ ಚಿತ್ರಿಸಲಾಗಿದೆ. ಎಕ್ಸ್‌ನಲ್ಲಿ ಲೊಗೊದ ಜತೆಗ ‘ನ್ಯಾಯ ದೊರಕಿತು, ಜೈ ಹಿಂದ್’ ಎಂದು ಭಾರತೀಯ ಸೇನೆ ಕ್ಯಾಪ್ಟನ್ ನೀಡಿದೆ.