LATEST NEWS
ಪಿಎಂ ಕಿಸಾನ್ – ಅಗಸ್ಟ್ 31 ರೊಳಗೆ ಇ-ಕೆವೈಸಿ ಮಾಡಿಸಲು ರೈತರಿಗೆ ಅವಕಾಶ
ಮಂಗಳೂರು ಅಗಸ್ಟ್ 24):- ಪ್ರಧಾನ ಮಂತ್ರಿ ಕಿಸಾನ್‍ಸಮ್ಮಾನ್ ನಿಧಿ ಯೋಜನೆಯಡಿ (ಪಿಎಂಕಿಸಾನ್) ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳು ತಮ್ಮ ಸೌಲಭ್ಯವನ್ನು ಮುಂದುವರಿಸಲು ತಮ್ಮ ಸಮೀಪದ ನಾಗರಿಕ ಸೇವಾ ಕೇಂದ್ರದಲ್ಲಿ(ಸಿಎಸ್‍ಸಿ) ವೆಬ್‍ಸೈಟ್ ವಿಳಾಸ: https://pmkisan.gov.in/ ನಲ್ಲಿ ಪೋರ್ಟಲ್‍ನ ಫಾರ್ಮರ್ ಕಾರ್ನರ್ ಮೂಲಕ ಆಧಾರ್ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆ ದಾಖಲಿಸಿ ಇ-ಕೆವೈಸಿ ಮಾಡಿಲು ಇದೇ ಆ.31ರ ವರೆಗೆ ಅವಕಾಶ ನೀಡಲಾಗಿದೆ. ಇ-ಕೆವೈಸಿ ಮಾಡಿಸದಿದ್ದಲ್ಲಿ ಆರ್ಥಿಕ ನೆರವು ಸ್ಥಗಿತಗೊಳಿಸಲಾಗುವುದು.
ಪಿ.ಎಂ. ಕಿಸಾನ್ ಯೋಜನೆ ಸೌಲಭ್ಯ ಮುಂದುವರಿಸಲು ಇ-ಕೆವೈಸಿ ಮಾಡಿಕೊಳ್ಳಲು ಬಾಕಿ ಇರುವ ರೈತರು ಅಂತಿಮ ದಿನಾಂಕದೊಳಗೆ ಸಮೀಪದ ನಾಗರೀಕ ಸೇವಾ ಕೇಂದ್ರ (ಸಿಎಸ್‍ಸಿ), ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ತಪ್ಪದೇ ಇ-ಕೆವೈಸಿ ಮಾಡಿಸಿಕೊಳ್ಳಬೇಕು.