LATEST NEWS
ಕೊರೊನಾ ರೋಗಿಗಳಿಗಾಗಿ ಪ್ಲಾಸ್ಮಾ ದಾನ ಮಾಡಿ ಮಾದರಿಯಾದ ಶಾಸಕ ಡಾ.ಭರತ್ ಶೆಟ್ಟಿ
ಮಂಗಳೂರು ಸೆಪ್ಟೆಂಬರ್ 17: ಕೊರೊನಾ ವಿರುದ್ದ ಹೋರಾಟದಲ್ಲಿ ಕೊರೊನಾದಿಂದ ಗುಣಮುಖರಾದವರ ಪ್ಲಾಸ್ಮಾ ಯಶಸ್ವಿ ಚಿಕಿತ್ಸೆಯಾಗಿದೆ ಎಂದು ಜಾಗೃತಿ ಮೂಡಿಸಿದರು ಕೂಡ ಜನ ಇನ್ನೂ ಪ್ಲಾಸ್ಮಾ ದಾನ ಮಾಡಲು ಬಯಸುವುದಿಲ್ಲ. ಆದರೆ ಕೊರೊನಾ ಸೋಂಕು ತಗುಲಿದ್ದ ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಡಾ.ವೈ.ಭರತ್ ಶೆಟ್ಟಿ ಇಂದು ಪ್ಲಾಸ್ಮಾ ದಾನ ಮಾಡಿದ್ದಾರೆ. ಈ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ನಗರದ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಪ್ಲಾಸ್ಮಾ ದಾನ ಮಾಡುವ ಮೂಲಕ ಶಾಸಕ ಭರತ್ ಶೆಟ್ಟಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಕಳೆದ ಜುಲೈ 2ರಂದು ಅವರಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಶಾಸಕರು ಚಿಕಿತ್ಸೆ ಪಡೆದು ಗುಣಮುಖರಾದ ಬಳಿಕ ಕ್ವಾರಂಟೈನ್ ನಲ್ಲಿದ್ದರು. ಒಂದು ವಾರದ ಹಿಂದೆ ಸಂಪೂರ್ಣ ಗುಣಮುಖರಾದ ಶಾಸಕ ಭರತ್ ಶೆಟ್ಟಿ , ಕೊರೊನಾ ಪಾಸಿಟಿವ್ ಆಗಿರುವ ವ್ಯಕ್ತಿಯೋಬ್ಬರಿಗೆ ಇಂದು ಪ್ಲಾಸ್ಮಾ ದಾನ ಮಾಡಿದ್ದಾರೆ.
ಕೊರೊನಾದಿಂದ ಸಂಪೂರ್ಣ ಗುಣಮುಖರಾದ ಬಳಿಕ ಶಾಸಕರು ಕ್ಷೇತ್ರದ ಕೆಲಸ, ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಇದೀಗ ಪ್ಲಾಸ್ಮಾ ದಾನ ಮಾಡುವ ಮೂಲಕ ಇತರರಿಗೆ ಮಾದರಿ ಜೊತೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.