Connect with us

LATEST NEWS

ಬಿಜೆ ವೈದ್ಯಕೀಯ ಕಾಲೇಜು ಯುಜಿ ಹಾಸ್ಟೆಲ್ ಮೆಸ್ ಮೇಲೆ ಪತನಗೊಂಡ ವಿಮಾನ – ವೈದ್ಯಕೀಯ ವಿಧ್ಯಾರ್ಥಿಗಳ ಸ್ಥಿತಿ ಕುರಿತು ಆತಂಕ

ಅಹಮದಾಬಾದ್ ಜೂನ್ 12: ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡು ಕನಿಷ್ಠ 100ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ Ai-171 ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಪತನಗೊಂಡು ಹಲವಾರು ಜನರು ಸಾವನ್ನಪ್ಪಿದರು. ವಿಮಾನದಲ್ಲಿ ಒಟ್ಟು 242 ಜನರು ಇದ್ದರು.


ವಿಮಾನವು ಮೇಘಾನಿ ನಗರದ ಬಿಜೆ ವೈದ್ಯಕೀಯ ಕಾಲೇಜು ಯುಜಿ ಹಾಸ್ಟೆಲ್ ಮೆಸ್ ಮೇಲೆ ನೇರವಾಗಿ ಅಪ್ಪಳಿಸಿದೆ. ಅಪಘಾತದ ಸಮಯದಲ್ಲಿ ವಿದ್ಯಾರ್ಥಿಗಳು ಹಾಸ್ಟೆಲ್ ಮೆಸ್‌ನಲ್ಲಿ ಇದ್ದರು ಎಂದು ಅಖಿಲ ಭಾರತ ವೈದ್ಯಕೀಯ ಸಂಘಗಳ ಒಕ್ಕೂಟ (ಎಫ್‌ಐಎಂಎ) ಹೇಳಿಕೊಂಡಿದೆ. ಎಫ್‌ಐಎಂಎ ಹಂಚಿಕೊಂಡ ಚಿತ್ರಗಳು ಹಾಸ್ಟೆಲ್ ಕಟ್ಟಡದಲ್ಲಿ ಸಿಲುಕಿರುವ ವಿಮಾನದ ಒಂದು ಭಾಗವು ಹಾನಿಗೊಳಗಾಗಿರುವುದನ್ನು ತೋರಿಸುತ್ತವೆ.


ಏತನ್ಮಧ್ಯೆ, ಅಪಘಾತದ ಸ್ಥಳದ ವೀಡಿಯೊಗಳು ಪತನಗೊಂಡ ವಿಮಾನದ ಭಾಗಗಳು ಸುತ್ತಲೂ ಬಿದ್ದಿರುವುದನ್ನು ತೋರಿಸುತ್ತವೆ ಮತ್ತು ಜನರು ಈ ಭಾಗಗಳನ್ನು ತಳ್ಳುತ್ತಿರುವುದು ಕಂಡುಬರುತ್ತದೆ.
ವಿಮಾನ ಅಪಘಾತದ ಸಂದರ್ಭ ಕೆಲವು ವಿಧ್ಯಾರ್ಥಿಗಳು ಸ್ಥಳದಲ್ಲಿ ಇರುವ ಸಾಧ್ಯತೆ ಇದ್ದು, ಮೆಡಿಕಲ್ ವಿಧ್ಯಾರ್ಥಿಗಳಲ್ಲಿ ಕೆಲವರಿಗೆ ಗಾಯಗಳಾಗಿರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *