LATEST NEWS
ಪಿಲಿಕುಳ ಕಂಬಳ ವಿಚಾರದಲ್ಲಿ ಬಿಲ್ಲವ ಸಮುದಾಯವನ್ನು ಎಳೆದು ತರಲಾಗುತ್ತಿದೆ – ಪ್ರತಿಭಾ ಕುಳಾಯಿ
ಮಂಗಳೂರು, ಸೆಪ್ಟೆಂಬರ್ 13: ಪಿಲಿಕುಳ ಕಂಬಳ ವಿಚಾರಕ್ಕೆ ಸಂಬಂಧಿಸಿದಂತೆ ಬಿಲ್ಲವ ಸಮುದಾಯವನ್ನು ಎಳೆದು ತರಲಾಗುತ್ತಿದ್ದು, ಪಿಲಿಕುಳ ಕಂಬಳಕ್ಕೂ, ಬಿಲ್ಲವ ಸಮುದಾಯಕ್ಕೂ ಏನು ಸಂಬಂಧ? ಇದರಲ್ಲಿ ಜಾತಿ ವಿಷಯವನ್ನು ಎತ್ತಿ ಕಟ್ಟೋದು ಎಷ್ಟು ಸಮಂಜಸ ಎಂದು ಕಾಂಗ್ರೇಸ್ ಮುಖಂಡೆ ಪ್ರತಿಭಾ ಕುಳಾಯಿ ಪ್ರಶ್ನಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲಾಡಳಿತವು ಶಾಸಕ ಉಮಾನಾಥ ಕೋಟ್ಯಾನ್ ಅವರನ್ನು ಆಹ್ವಾನಿಸಿಲ್ಲ ಎನ್ನುವುದು ಸುಳ್ಳು. ಜಿಲ್ಲಾಧಿಕಾರಿ ಅವರು ಶಾಸಕರಿಗೆ ಮೊಬೈಲ್ ಕರೆ ಮಾಡಿದ್ದರು, ಆದರೆ ಅವರು ಕರೆ ಸ್ವೀಕರಿಸಿಲ್ಲ. ನಂತರ ಎಸ್ಎಂಎಸ್ ಮೂಲಕ ಆಹ್ವಾನ ನೀಡಿದ್ದಾರೆ. ಅಲ್ಲದೆ ಕಂಬಳ ಸಮಿತಿಯವರು ಕೂಡ ಉಮಾನಾಥ ಕೋಟ್ಯಾ ನ್ ಅವರಿಗೆ ಆಹ್ವಾನ ನೀಡಿದ್ದರು ಎಂದು ಪ್ರತಿಭಾ ಕುಳಾಯಿ ಹೇಳಿದರು.
ಬಿಜೆಪಿ ಸರಕಾರದ ಅವಧಿಯಲ್ಲಿ ಪಿಲಿಕುಳ ಅಭಿವೃದ್ದಿಗೆ ಶಾಸಕ ಉಮಾನಾಥ ಕೊಟ್ಯಾನ್ ಯಾವುದೇ ಕೆಲಸ ಮಾಡಿಲ್ಲ, ಪಿಲಿಕುಳ ಪ್ರವಾಸೋದ್ಯಮವನ್ನು ಮತ್ತೆ ಪುನರುತ್ಥಾನ ಮಾಡಲು ಈಗ ಸರ್ಕಾರದ ವತಿಯಿಂದ ಮತ್ತೆ ಕಂಬಳ ಆಯೋಜಿಸಲಾಗುತ್ತಿದೆ. ಇದಕ್ಕೆ ಸಹಕಾರ ನೀಡುವುದನ್ನು ಬಿಟ್ಟು ಅನಗತ್ಯವಾಗಿ ಜಾತಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಪಿಲಿಕುಳ ಕಾರ್ಯಕ್ರಮಕ್ಕೆ ಎಂಎಲ್ಎ ಅವರನ್ನು ಕರೆದಿಲ್ಲ ಅಂತಾರೆ, ಜಿಲ್ಲಾಧಿಕಾರಿ ಇವ್ರ ಶಾಸಕರಿಗೆ ಕರೆ ಮಾಡಿದ್ರು ಮತ್ತು ಸಂದೇಶ ನೀಡಿದ್ದಾರೆ. ಆದ್ರೆ ಇವ್ರ ಮನೆಗೆ ಭೇಟಿ ನೀಡಿ ಜಿಲ್ಲಾಧಿಕಾರಿ ಕರೆಯಬೇಕಾ…?, ಇವ್ರ ಆಡಳಿತದಲ್ಲಿ ಅನೇಕ ಕಾರ್ಯಕ್ರಮ ಗಳಿಗೆ ಎಂಎಲ್ಸಿ ಹರೀಶ್ ಕುಮಾರ್ ಅವರನ್ನು ಕರೆದಿದ್ರ. ಕಳೆದ ಇವ್ರ ಆಡಳಿತದಲ್ಲಿ ಇವ್ರು ಶಾಸಕರಾಗಿ ಏನು ಮಾಡಿದ್ದಾರೆ. ಡಿಸಿ ಅವರಿಗೆ ಅವರ ಕೆಲಸದ ಬಗ್ಗೆ ಗೊತ್ತಿದೆ ಅವರು ಯಾರನ್ನು ಕೇಳಿ ಅವರ ಕೆಲಸ ಮಾಡಬೇಕಿಲ್ಲ ಎಂದರು.