DAKSHINA KANNADA
“ಪಿಲಿ” ತುಳು ಚಲನಚಿತ್ರ ಬಿಡುಗಡೆ: ಪ್ರೇಕ್ಷಕರ ಉತ್ತಮ ಪ್ರತಿಕ್ರಿಯೆ
ಮಂಗಳೂರು, ಫೆಬ್ರವರಿ 24: ತುಳುನಾಡಿನ ಸಾಂಪ್ರದಾಯಿಕ ಕಲೆಯಾದ ಹುಲಿ ವೇಷದ ಕಥಾ ಹಂದರ ಹೊಂದಿರುವ ಪಿಲಿ ಸಿನೆಮಾ ಇಂದು ಭಾರತ್ ಬಿಗ್ ನಿನೆಮಾದಲ್ಲಿ ಬಿಡುಗಡೆ ಗೊಂಡಿದೆ.
ನಗರದ ಭಾರತ್ ಬಿಗ್ ನಿನೆಮಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿರ್ದೇಶಕ, ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ ರವರು ದೀಪ ಬೆಳಗುವುದರ ಮೂಲಕ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಖ್ಯಾತ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್, ತುಳುನಾಡ ರಕ್ಷಣಾ ವೇದಿಕೆಯ ಯೋಗಿಶ್ ಜೊತೆಗಿದ್ದರು.
ಮೈ ನೇಮ್ ಈಸ್ ಅಣ್ಣಪ್ಪ’ ತುಳು ಚಿತ್ರದ ನಿರ್ದೇಶಕ ಮಯೂರ್ ಆರ್ ಶೆಟ್ಟಿ ಚಿತ್ರದ ನಿರ್ದೇಶನ ಮತ್ತು ಛಾಯಾಗ್ರಹಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಪಿಲಿ ಸಿನೆಮಾವನ್ನು ಆತ್ಮಾನಂದ ರೈ ನಿರ್ಮಾಣ ಮಾಡಿದ್ದು, ಭರತ್ ರಾಮ್ ರೈ ಸಹ ನಿರ್ಮಾಣ ಮಾಡಿದ್ದಾರೆ.
ಈ ನಿನೆಮಾಗೆ ನಾಯಕ ನಟನಾಗಿ ಭರತ್ ಭಂಡಾರಿ ನಟಿಸಿದ್ದು, ವಿಜಯಕುಮಾರ್ ಕೊಡಿಯಾಲ್ಬೈಲ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಾರಾಗಣದಲ್ಲಿ ಸ್ವಾತಿ ಶೆಟ್ಟಿ, ತ್ರಿಶಾ ಶೆಟ್ಟಿ, ಕೃತಿ ಶೆಟ್ಟಿ, ನವೀನ್ ಡಿ ಪಾಟೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು, ವಿಸ್ಮಯ ವಿನಾಯಕ್, ಉಮೇಶ್ ಮಿಜಾರ್, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ದೀಪಕ್ ರೈ ಪಾಣಾಜೆ, ಚೇತನ್ ರೈ, ಮಣಿ ಮುಂತಾದ ನಟರಿದ್ದಾರೆ.
ಮಣಿಕಾಂತ್ ಕದ್ರಿ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಮಯೂರ್ ಆರ್ ಶೆಟ್ಟಿ, ಡಿ ಬಿ ಸಿ ಶೇಖರ್ ಮತ್ತು ಕೆ ಕೆ ಪೇಜಾವರ್ ನಾಲ್ಕು ಸುಂದರ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಸಂದೇಶ್ ಬಿಜೈ ಸಂಭಾಷಣೆ ಬರೆದಿದ್ದು, ಚಿತ್ರ ನಿರ್ದೇಶಕ ತ್ರಿಶೂಲ್ ಶೆಟ್ಟಿ, ಸಂದೇಶ್ ಬಿಜೈ ಮತ್ತಿತರರು ನಿರ್ದೇಶಕರ ತಂಡದಲ್ಲಿದ್ದಾರೆ.