DAKSHINA KANNADA
ಫೋಟೋಗ್ರಾಫರ್ ದಿವಾಕರ ಮುಂಡಾಜೆ ಹೃದಯಘಾತದಿಂದ ನಿಧನ
ಸುಳ್ಯ ಅಕ್ಟೋಬರ್ 16: ಹರಿಹರ ಪಲ್ಲತಡ್ಕದಲ್ಲಿ ಪತ್ರಿಕಾ ವಿತರಕ ಹಾಗೂ ಛಾಯಾಗ್ರಾಹಕರಾಗಿರುವ ದಿವಾಕರ ಮುಂಡಾಜೆಯವರು ಇಂದು ಬೆಳಿಗ್ಗೆ ತೀವ್ರ ಹೃದಯಘಾತಕ್ಕೊಳಗಾಗಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 55 ವರ್ಷ ವಯಸ್ಸಾಗಿತ್ತು.
ಬೆಳಿಗ್ಗೆ ತನ್ನ ಅಂಗಡಿ ತೆರೆಯಲೆಂದು ಮನೆಯಿಂದ ಕಾರಲ್ಲಿ ಬರುತ್ತಿದ್ದ ದಿವಾಕರ ಮುಂಡಾಜೆಯವರಿಗೆ ಹರಿಹರ ಪಲ್ಲತಡ್ಕ ಪೇಟೆಯ ಬಳಿ ಹೃದಯಘಾತವಾಗಿದೆ. ಕೂಡಲೇ ಕಾರು ನಿಲ್ಲಿಸಿದ್ದರು, ತೀವ್ರ ಹೃದಯಾಘಾತದಿಂದಾಗಿ ಕಾರಿನಲ್ಲೇ ಕೊನೆಯುಸಿರೆಳೆದಿದ್ದಾರೆ. ಕೂಡಲೇ ಸ್ಥಳೀಯರು ವೈದ್ಯರನ್ನು ಕರೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇತ್ತೀಚೆಗೆ ಹೃದಯಾಘಾತ ಪ್ರಕರಣಗಳು ಏರಿಕೆಯಾಗುತ್ತಲೇ ಇದೆ. ಯುವಕರು ಸೇರಿದಂತೆ ಮಧ್ಯ ವಯಸ್ಸಿನವರು ಹೃದಯಾಘಾತದಿಂದ ಸಾವನಪ್ಪುತ್ತಿದ್ದಾರೆ. ಹೃದಯಘಾತದ ತೀವ್ರತೆಗೆ ಎಷ್ಟು ಅಂದರೆ ಆಸ್ಪತ್ರೆಗೆ ತೆಗೆದುಕೊಂಡು ಹೋಗುವ ಅವಕಾಶವೇ ಇಲ್ಲದಂತಾಗಿದ್ದು ಸದ್ಯ ಭಾರೀ ಆತಂಕಕ್ಕೆ ಕಾರಣವಾಗಿದೆ.