LATEST NEWS
ಫೋನ್ನಲ್ಲಿ ಬೆದರಿಕೆ ಹಾಕಿದ ಪ್ರಕರಣ: ನಾಲ್ವರು ಆರೋಪಿಗಳ ಬಂಧನ

ಪುತ್ತೂರು, ಸೆಪ್ಟೆಂಬರ್ 20: ಯುವಕನೋರ್ವನಿಗೆ ಫೋನ್ನಲ್ಲಿ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಸೆಪ್ಟಂಬರ್ 17 ರಂದು ಪುತ್ತೂರಿನ ನಿರಾಳ ಎನ್ನುವ ಹೆಸರಿನ ಬಾರ್ ನಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪುತ್ತೂರು ಡಿವೈಎಸ್ಪಿ ಡಾ|| ವೀರಯ್ಯ ಹಿರೇಮಠರವರ ನೇತೃತ್ವದ ತಂಡ ಬಂಧಿಸಿದೆ.

ಆರೋಪಿಗಳನ್ನು ನೆಕ್ಕಿಲ ನಿವಾಸಿ ಪ್ರತಾಪ್ ಮತ್ತು ಜಗದೀಶ ಅಲಿಯಾಸ್ ಅಚ್ಚು, ಜೈನರಗುರಿ ನಿವಾಸಿ ಶರತ್ ಕುಮಾರ ಮತ್ತು ಅಭಿಜಿತ್ ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಆರೋಪಿಗಳಿಗೆ ನ್ಯಾಯಾಲಯದ ಆದೇಶದಂತೆ ನ್ಯಾಯಾಂಗ ಬಂಧನಕ್ಕೆ ಕೊಡಲಾಗಿದೆ.