BELTHANGADI
ಬೀದಿ ನಾಯಿ ಚಿಕಿತ್ಸೆಗೆ ದಿಲ್ಲಿಯಿಂದ ಫೋನ್ ಕರೆ
ಬೀದಿ ನಾಯಿ ಚಿಕಿತ್ಸೆಗೆ ದಿಲ್ಲಿಯಿಂದ ಫೋನ್ ಕರೆ
ಪುತ್ತೂರು, ಜನವರಿ 11 : ಸಣ್ಣ ಹಳ್ಳೀಯ ಬೀದಿಯಲ್ಲಿ ಅನಾರೋಗ್ಯಕ್ಕೀಡಾಗಿ ಒದ್ದಾಡುತಿದ್ದ ಬೀದಿನಾಯಿಯೊಂದರ ರಕ್ಷಣೆಗೆ ರಾ಼ಷ್ಟ್ರ ರಾಜಧಾನಿ ದಿಲ್ಲಿಯಿಂದ ಫೋನ್ ಕರೆ ಬಂದಿದೆ.
ಫೋನ್ ಕರೆಗೆ ಸ್ಪಂದಿಸಿ ಚಿಕಿತ್ಸೆಯೂ ನೀಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸಂಭವಿಸಿದೆ.
ಇತಿಹಾಸ ಪ್ರಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ದೇಶ ವಿದೇಶಗಳಿಂದ ಪ್ರತಿನಿತ್ಯ ಸಾವಿರಾರು ಜನರು ಬರುತ್ತಿರುತ್ತಾರೆ.
ಧರ್ಮಸ್ಥಳದ ವೈಶಾಲಿ ವಸತಿಗೃಹದ ಪಕ್ಕದಲ್ಲಿ ಬುಧವಾರ ಅಪರಾಹ್ನ ಬೀದಿನಾಯಿಯೊಂದು ತೀವ್ರ ಅನಾರೋಗ್ಯ ದಿಂದ ಬಳಲಿ ನರಳುತ್ತಿತ್ತು.
ಈ ಮೂಕ ಪ್ರಾಣಿಯ ವೇದನೆ ನೋಡಿದ ಕ್ಷೇತ್ರಕ್ಕೆ ಬಂದ ಯಾತ್ರಿಕರೊಬ್ಬರು ದಿಲ್ಲಿಯ ಪ್ರಾಣಿದಯಾ ಸಂಘಕ್ಕೆ ವಾಟ್ಸ್‌ಆ್ಯಪ್ ಮೂಲಕ ಚಿತ್ರ ಸಹಿತ ಮಾಹಿತಿ ನೀಡಿದ್ದರು.
ಈ ಬಗ್ಗೆ ಗಮನ ಹರಿಸಿದ ಪ್ರಾಣಿ ಹಕ್ಕುಗಳ ಹೋರಾಟಗಾರ್ತಿ ಮನೇಕಾ ಗಾಂಧಿ ಅವರು ನೆರವಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತವನ್ನು ಸಂಪರ್ಕಿಸಿದ್ದಾರೆ,
ಮತ್ತು ಆ ಬೀದಿ ನಾಯಿಯ ಚಿಕಿತ್ಸೆಗೆ ತತ್‌ಕ್ಷಣ ಸ್ಪಂದಿಸಿ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದಾರೆ.
ಕೂಡಲೇ ಎಚ್ಚೆತ್ತ ಪಶುಸಂಗೋಪನಾಧಿಕಾರಿಗಳು ನಾಯಿಯಿದ್ದ ಸ್ಥಳಕ್ಕೆ ಧಾವಿಸಿ ನಾಯಿಗೆ ಪ್ರಾರ್ಥಮಿಕ ಚಿಕಿತ್ಸೆ ನೀಡಿದ್ದಾರೆ.
ಮಾತ್ರವಲ್ಲ ಹೆಚ್ಚಿನ ಆರೈಕೆಗೆ ನಾಯಿಯನ್ನು ಆ್ಯಂಬುಲೆನ್ಸ್ ಮೂಲಕ ಮಂಗಳೂರಿಗೆ ಕಳುಹಿಸಿಕೊಟ್ಟಿದ್ದಾರೆ.