LATEST NEWS
ಪೆಟ್ರೋಲ್ ಬಂಕ್ ದರೋಡೆಕೋರರ ಬಂಧನ…!

ಮಂಗಳೂರು ಅಕ್ಟೋಬರ್ 4: ಮಾರಕಾಸ್ತ್ರಗಳೊಂದಿಗೆ ಹೆದ್ದಾರಿ ಬದಿಯ ಪೆಟ್ರೋಲ್ ಬಂಕ್ ಗಳನ್ನು ದರೋಡೆ ಮಾಡುತ್ತಿದ್ದ ಮೂವರು ಖತರ್ನಾಕ್ ದರೋಡೆಕೋರರನ್ನು ಮಂಗಳೂರಿನ ಕಂಕನಾಡಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಇದೇ ತಂಡ ಜಿಲ್ಲೆಯ ವಿವಿಧ ಕಳವು ಪ್ರಕರಣಗಳಲ್ಲೂ ಭಾಗಿಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಸೆಪ್ಟೆಂಬರ್ 20 ರಂದು ರಾತ್ರಿ ಮಂಗಳೂರಿನ ಪಂಪ್ವೆಲ್ ಉಜ್ಜೋಡಿ ಬಳಿಯ ಸುವರ್ಣ ಪೆಟ್ರೊಲ್ ಪಂಪ್ಗೆ ಬೈಕಿನಲ್ಲಿ ಬಂದು ಬಾಗಿಲು ಒಡೆದು ಕ್ಯಾಶ್ ಗಳೊಂದಿಗೆ ಪರಾರಿಯಾಗಿದ್ದರು. ಬಳಿಕ ಇದೇ ತಂಡ ಬಂಟ್ವಾಳದ ಪೆಟ್ರೋಲ್ ಪಂಪ್ ನಲ್ಲೂ ಕಳವು ಮಾಡಿತ್ತು.

ಅಲ್ಲದೇ ಜಿಲ್ಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ 6 ಕಳವು ಪ್ರಕರಣಗಳು ದಾಖಲಾಗಿವೆ. ಬಂಧಿತರರನ್ನು ಉಳ್ಳಾಲ ಕೆ ಸಿ ರೋಡಿನ ಮೋಹಮ್ಮದ್ ಸುಹೈಲ್, ಆಶೀಕ್ ಮತ್ತು ನಗರದ ಫಳ್ನೀರಿನ ಮಹಮ್ಮದ್ ಇಕ್ಬಾಲ್ ಎಂದು ಗುರುತ್ತಿಸಲಾಗಿದ್ದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.