LATEST NEWS
ದುಬಾರಿ ದುನಿಯಾ – ಎಲ್ ಪಿಜಿ 900 ಗಡಿ – ಪೆಟ್ರೋಲ್ ಡಿಸೇಲ್ ಬೆಲೆಯಲ್ಲಿ ಮತ್ತೆ ಏರಿಕೆ…!!
ನವದೆಹಲಿ: ಎಲ್ ಪಿಜಿ ಪೆಟ್ರೋಲ್ ಡಿಸೇಲ್ ಬೆಲೆಗಳು ಒಂದೇ ದಿನ ಏರಿಕೆಯಾಗಿವೆ. ಪೆಟ್ರೋಲ್ ಡಿಸೇಲ್ ಬೆಲೆ ದಿನದಿಂದ ದಿನ್ಕಕೆ ಏರಿಕೆಯಾಗುತ್ತಿದ್ದರೆ , ಗೃಹ ಬಳಕೆಯ ಅಡುಗೆ ಅನಿಲದ ಬೆಲೆ ಇಂದು ಏರಿಕೆಯಾಗಿದೆ.
ಎಲ್‌ಪಿಜಿ ದರ ₹15ರಷ್ಟು ಹೆಚ್ಚಳ ಮಾಡುವ ಮೂಲಕ ಪ್ರತಿ ಸಿಲಿಂಡರ್ ಬೆಲೆ ₹900 ಸಮೀಪಿಸಿದೆ. ನವದೆಹಲಿಯಲ್ಲಿ ಸಬ್ಸಿಡಿ ರಹಿತ 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ದರ ₹899.50ಕ್ಕೆ ಏರಿಕೆಯಾಗಿದೆ. 5 ಕೆಜಿ ಎಲ್‌ಪಿಜಿ ಸಿಲಿಂಡರ್‌ಗೆ ₹502 ಆಗಿದ್ದು, ಇವತ್ತಿನಿಂದಲೇ ಹೊಸ ದರ ಅನ್ವಯವಾಗಿದೆ.
ಇನ್ನು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಸರಣಿ ಮತ್ತೆ ಮುಂದುವರೆದಿದ್ದು, ಸದ್ಯದಲ್ಲೇ 110 ರ ಗಡಿ ದಾಟಲಿದೆ ಎಂದು ಹೇಳಲಾಗಿದೆ. ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ ಇಂದು ಲೀಟರ್ ಗೆ 30 ಪೈಸೆ ಡೀಸೆಲ್ ಬೆಲೆ ಲೀಟರ್ ಗೆ 35 ಪೈಸೆ ಏರಿಕೆಯಾಗಿದೆ. ಮುಂಬೈಯಲ್ಲಿ ಪೆಟ್ರೋಲ್ ದರ ಲೀಟರ್ ಗೆ 29 ಪೈಸೆ ಮತ್ತು ಡೀಸೆಲ್ ದರ ಲೀಟರ್ ಗೆ 37 ಪೈಸೆ ಹೆಚ್ಚಳವಾಗಿದೆ.
ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ ₹108.96, ಡೀಸೆಲ್‌ಗೆ ₹99.17; ಚೆನ್ನೈನಲ್ಲಿ ಪೆಟ್ರೋಲ್ ₹100.49, ಡೀಸೆಲ್ ₹95.93; ಕೋಲ್ಕತ್ತದಲ್ಲಿ ಪೆಟ್ರೋಲ್ ಬೆಲೆ ₹103.65 ಮತ್ತು ಡೀಸೆಲ್ ಬೆಲೆ ₹94.53 ಹಾಗೂ ಬೆಂಗಳೂರಿನಲ್ಲಿ ಪೆಟ್ರೋಲ್ ₹106.52, ಡೀಸೆಲ್ ₹97.03 ತಲುಪಿದೆ.