LATEST NEWS
ಕಳೆದ ಒಂದು ವಾರದಿಂದ ಏರಿಕೆಯಲ್ಲಿದೆ ಪೆಟ್ರೋಲ್ ದರ….!!

ನವದೆಹಲಿ ಅಗಸ್ಟ್ 22: ಕೊರೊನಾ ಸಂಕಷ್ಟಗಳ ನಡುವೆ ಕಳೆದ ಒಂದು ವಾರದಿಂದ ದೇಶದಲ್ಲಿ ಪೆಟ್ರೋಲ್ ದರ ಏರಿಕೆಯಲ್ಲಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಕಡಿಮೆ ಇದ್ದರೂ ಕೂಡ ನಮ್ಮ ದೇಶದಲ್ಲಿ ಮಾತ್ರ ಪೆಟ್ರೋಲ್ ಬೆಲೆ ಏರಿಕೆಯಲ್ಲೇ ಇದೆ. ಇನ್ನೂ ಇಡೀ ದೇಶ ಸಂಪೂರ್ಣ ಸಹಜ ಸ್ಥಿತಿಗೆ ಬಂದಿಲ್ಲ. ರಸ್ತೆಗೆ ಸರಿಯಾಗಿ ಇನ್ನೂ ವಾಹನಗಳೇ ಇಳಿದಿಲ್ಲ. ಆದರೂ ದೇಶದಲ್ಲಿ ತೈಲ ಬೆಲೆ ಏರಿಕೆಯಾಗುತ್ತಲೆ ಇರುವುದು ಆಶ್ಚರ್ಯ ಮೂಡಿಸಿದೆ.
ಕಳೆದ ಒಂದು ವಾರದಿಂದ ಕೊಂಚ ಕೊಂಚವಾಗೇ ಪೆಟ್ರೋಲ್ ದರದಲ್ಲಿ ಏರಿಕೆಯಾಗಿದೆ. ಆದರೆ ಡೀಸೆಲ್ ದರ ಮಾತ್ರ ಸ್ಥಿರವಾಗಿತ್ತು. ಇಂದು ಕೂಡ ಯಾವುದೇ ಬದಲಾವಣೆ ಡೀಸೆಲ್ ದರದಲ್ಲಿ ಕಂಡು ಬಂದಿಲ್ಲ. ಇದು ಸರಕು ಸಾಗಟ ಮಾಡುವವರಿಗೆ ಕೊಂಚ ರಿಲೀಫ್ ನೀಡಿದೆ.

ಬೆಲೆ ಏರಿಕೆ ಬಳಿಕ ಇಂದಿನ ತೈಲ ದರಗಳು
ಬೆಂಗಳೂರು
ಪೆಟ್ರೋಲ್: 83.83 ರೂ. ( ₹0.20 ಪೈಸೆ ಏರಿಕೆ)
ಡೀಸೆಲ್: 77.88 ರೂ. (ಬದಲಾವಣೆ ಇಲ್ಲ)
ನವದೆಹಲಿ
ಪೆಟ್ರೋಲ್:81.19 ರೂ. ( ₹0.19 ಪೈಸೆ ಏರಿಕೆ)
ಡೀಸೆಲ್: 73.56 ರೂ. (ಬದಲಾವಣೆ ಇಲ್ಲ)
ಮುಂಬಯಿ
ಪೆಟ್ರೋಲ್: 87.87 ರೂ. ( ₹0.19 ಪೈಸೆ ಏರಿಕೆ)
ಡೀಸೆಲ್: 80.11 ರೂ. (ಬದಲಾವಣೆ ಇಲ್ಲ)
ಚೆನ್ನೈ
ಪೆಟ್ರೋಲ್: 84.27 ರೂ. (₹0.18 ಪೈಸೆ ಏರಿಕೆ)
ಡೀಸೆಲ್: 78.87 ರೂ.(₹0.1 ಪೈಸೆ ಏರಿಕೆ)