Connect with us

    FILM

    ಯೂಟ್ಯೂಬರ್ ಅಲ್ಲದೆ ನಟನೂ ಕೂಡ ಬ್ಲೂ ಫಿಲ್ಮ್ ಮಾಡ್ತೀಯಾ ಅಂತ ಕೇಳಿದ : ಪೆಂಟಗನ್ ನಟಿಯ ಕಣ್ಣೀರು

    ಬೆಂಗಳೂರು ಎಪ್ರಿಲ್ 04: ಪೆಂಗಟನ್ ಚಿತ್ರದ ಕಾಮನಬಿಲ್ಲು ವಿಡಿಯೋ ಹಾಡಿನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡು ಎಲ್ಲರ ಹುಬ್ಬೆರಿಸಿದ್ದ ನಟಿಗೆ ಇದೀಗ ಬ್ಲೂ ಫಿಲ್ಮ್ ಮಾಡ್ತೀರಾ ಎಂಬ ಪ್ರಶ್ನೆ ಕಾಟಕೊಡುತ್ತಿದೆ. ಸಂದರ್ಶನ ಒಂದರಲ್ಲಿ ಯೂಟ್ಯೂಬರ್ ಒಬ್ಬ ನೀವು Nude ಚಿತ್ರಗಳನ್ನು ಮಾಡುತ್ತೀರಾ ಎಂದು ಪ್ರಶ್ನಿಸಿದ್ದು ಇದಕ್ಕೆ ನಟಿ ಆತನ ಮೇಲೆ ಗರಂ ಆಗಿದ್ದರು.

    ನಂತರ ಇದೇ ವಿಚಾರವಾಗಿ ರಾಜಹುಲಿ ಖ್ಯಾತಿಯ ಸಹ ನಟ ಹರ್ಷ ತಮ್ಮ ಇನ್ ಸ್ಟಾಗ್ರಾಂನಲ್ಲಿ ನಟಿಗೆ ನೀವು ನ್ಯೂಡ್ ಫಿಲ್ಮ್ ಮಾಡ್ತೀರಾ ಎಂದು ಪ್ರಶ್ನಿಸಿದ್ದು ಈ ಸಂಬಂಧ ನಟಿ ಇಂದು ಸುದ್ಗಿಗೋಷ್ಠಿ ನಡೆಸಿ ನಟನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಓರ್ವ ಸಹ ನಟನಾಗಿ ಈ ರೀತಿ ಪ್ರಶ್ನೆ ಕೇಳಬಹುದೇ ಎಂದು ಪ್ರಶ್ನಿಸಿದ್ದಾರೆ. ನಾವು ಚಿತ್ರರಂಗದ ಒಂದೇ ಕುಟುಂಬದಲ್ಲಿ ಇರುವಂತವರು. ಹೀಗಿದ್ದರು ಹರ್ಷ ನನಗೆ ಈ ರೀತಿ ಪ್ರಶ್ನಿಸಿರುವುದು ಎಷ್ಟು ಸರಿ ಎಂದು ಕೇಳಿದ್ದಾರೆ.


    ಐದು ಕಥೆಗಳನ್ನು ಒಳಗೊಂಡಿರುವ ಪೆಂಟಗನ್ ಸಿನಿಮಾದ ಒಂದು ಕಥೆಯಲ್ಲಿ ನಟಿ ತನಿಷಾ ಕುಪ್ಪಂಡ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಸಹ ನಟನ ಜೊತೆ ಲಿಪ್ ಲಾಕ್ ಮತ್ತು ಬ್ಯಾಕ್ ಲೆಸ್ ಕಾರಣದಿಂದಾಗಿಯೂ ಸುದ್ದಿಯಾಗಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply