Connect with us

    LATEST NEWS

    ಪರಸ್ತ್ರೀ ಸಂಗ ಶಿರೂರು ಶ್ರೀಗಳ ಸಾವಿಗೆ ಕಾರಣ ? ಟ್ವಿಸ್ಟ್ ನೀಡಿದ ಪೇಜಾವರ ಶ್ರೀ ಹೇಳಿಕೆ

    ಪರಸ್ತ್ರೀ ಸಂಗ ಶಿರೂರು ಶ್ರೀಗಳ ಸಾವಿಗೆ ಕಾರಣ ? ಟ್ವಿಸ್ಟ್ ನೀಡಿದ ಪೇಜಾವರ ಶ್ರೀ ಹೇಳಿಕೆ

    ಉಡುಪಿ ಜುಲೈ 20: ಶಿರೂರು ಶ್ರೀ ಗಳ ಸಾವು ವಿಪರೀತ ಮದ್ಯಪಾನ‌ ಮಾಡಿದ್ದರಿಂದ ಆಗಿದೆಯೇ? ಅಥವಾ ಹೊಸ ಮಹಿಳೆಯ ಸಂಪರ್ಕ ದಿಂದ ವಿಷಪ್ರಾಶನ ಮಾಡಿಸಲಾಗಿದೆಯೇ? ಎಂದು ಪೇಜಾವರ ಶ್ರೀ ಪ್ರಶ್ನೆ ಎತ್ತಿರುವುದು ಈಗ ಭಾರೀ ಚರ್ಚೆಗೆ ಕಾರಣ ವಾಗಿದೆ. ಶಿರೂರು ಶ್ರೀ ಗಳ ಅಕಾಲಿಕ ಸಾವಿಗೆ ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮಿಜಿ ಹೊಸ ಟ್ವಿಸ್ಟ್ ನೀಡಿದ್ದಾರೆ. ಈ ಮೂಲಕ ಶಿರೂರು ಶ್ರೀ ಗಳ ರಹಸ್ಯ ಒಂದೊಂದಾಗಿ ಹೊರ ಬರತೊಡಗಿದೆ.

    ಉಡುಪಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಪೇಜಾವರ ಶ್ರೀ ಗಳು ಶಿರೂರು ಲಕ್ಷ್ಮಿವರ ತೀರ್ಥರ ಸಾವಿನ ಸಂದರ್ಭದಲ್ಲಿ ನಾನು ಊರಲ್ಲಿ ‌ಇರಲಿಲ್ಲ. ಅವರ ಅಕಾಲಿಕ ಸಾವಿಗೆ ವಿಷ ಪ್ರಾಶನವೋ, ಆಹಾರ ದೋಷ ಕಾರಣವೋ ಗೊತ್ತಿಲ್ಲ. ಅವರ ಜೊತೆಗಿದ್ದವರೇ ಕೊಟ್ಟಿದ್ದಾರೋ ಗೊತ್ತಿಲ್ಲ ಎಂದು ಸಂಶಯ ವ್ಯಕ್ತಪಡಿಸಿದರು.

    ಶಿರೂರು ಶ್ರೀ ಗಳ ಅತಿಯಾದ ಮದ್ಯಪಾನದಿಂದ ಆಗಿದೆ ಅಂದಿದ್ದಾರೆ. ಶಿರೂರು ಶ್ರೀ ಗಳಿಗೆ ಹೊಸ ಮಹಿಳೆಯ ಸಂಪರ್ಕ ಇತ್ತು. ಅವರಲ್ಲಿ ಏನಾದರೂ ಜಗಳ ಅಗಿರಬಹುದಾ? ಎಂದು ಹೇಳಿದ ಅವರು ಕಲಾಯಿ ಹಾಕದ ಪಾತ್ರೆಯಲ್ಲಿಯ ಆಹಾರವನ್ನು ಶಿರೂರು ಶ್ರೀ ತಿಂದಿದ್ದಾರೆ ಎಂದು ಶಿರೂರು ಸಹೋದರ ತಿಳಿಸಿದ್ದರು. ಈ ಕುರಿತು ಸರಿಯಾದ ವಿಚಾರಣೆ ಆಗಲಿ ಎಂದು ಅವರು ಒತ್ತಾಯಿಸಿದರು.

    ಮಠದ ಕಡೆಯಿಂದ ವಿಷಪ್ರಾಶನ‌ವಾಗುವ ಸಾಧ್ಯತೆ ಇಲ್ಲ. ಒಂದು ವೇಳೆ ಆಗಿದ್ದರೆ ಆವರ ಮಠದ ಒಳಗಿನವರೇ ಇರಬಹುದು. ಶಿರೂರು ಶ್ರೀ ಗಳಿಗೆ ಇಷ್ಟರವರೆಗೆ ಒಬ್ಬ ಮಹಿಳೆ ‌ಜೊತೆ ಸಂಪರ್ಕ ಇತ್ತು. ಇತ್ತೀಚೆಗೆ ಹೊಸ ಮಹಿಳೆಯ ಸಂಪರ್ಕ ಆಗಿತ್ತು ಅವರಲ್ಲಾದ ಮನಸ್ತಾಪ ದಿಂದ ಈ ಸಾವು ಸಂಭವಿಸಿರಬಹುದೇ ? ಎಂದು ಅವರು ಪ್ರಶ್ನಿಸಿದರು. ಆದರೆ ಈ ಮೂಲಕ ಪೇಜಾವರ ಶ್ರೀ ಗಳು, ಶಿರೂರು ಶ್ರೀಗಳ ರಹಸ್ಯಗಳನ್ನು ಬಯಲಿಗೆ ಎಳೆದಿದ್ದಾರೆ.

    ಸನ್ಯಾಸ ಧರ್ಮ, ತತ್ವವನ್ನು ಪಾಲಿಸದ ಶಿರೂರು ಶ್ರೀ ಮಠದ ದೇವರಿಗೆ ಪೂಜೆ ಸಲ್ಲಿಸುವುದು ಬೇಡ ಎಂದಿದ್ದೆ. ಅವರ ಪರ್ಯಾಯದಲ್ಲೂ‌ ಪೂಜೆಗೆ ಹೋಗಿದ್ದೆನೆ. ಅದರೆ ಕಳೆದ ಬಾರಿಯ ನನ್ನ ಮರ್ಯಾಯ ಸಂದರ್ಭದಲ್ಲಿ ದೇವರ ಪೂಜೆಗೆ ಅವರಿಗೆ ಅವಕಾಶ ಕೊಟ್ಟಿಲ್ಲ. ಅವರಿಗೆ ಈ ಬಗ್ಗೆ ಬೇಸರ ಇತ್ತು ಎಂದು ಪೇಜಾವರ ಶ್ರೀ ತಿಳಿಸಿದರು.

    ಆದರೂ ನನಗೆ ಅವರ ಬಗ್ಗೆ ಬಹುವಾದ ಪ್ರೀತಿ ಇತ್ತು. ಅನೇಕ ಸಲ ನನ್ನ ಬಳಿ ಬಂದು ತಪ್ಪು ಒಪ್ಪಿಕೊಂಡಿದ್ದರು. ಅವರಿಗೆ ಬುದ್ದಿ ಹೇಳಿದರೂ ಅವರು ಸರಿಯಾಗಿಲ್ಲ. ಅವರಿಗೆ ಮಕ್ಕಳಿದ್ದಾರೆ ಎಂದು ನನ್ನಲ್ಲಿಯೇ ಒಪ್ಪಿಕೊಂಡಿದ್ದರರು ಎಂದು ಸ್ಫೋಟಕ ಮಾಹಿತಿಯನ್ನು ಪೇಜಾವರ ಶ್ರಿ ಬಹಿರಂಗ ಪಡಿಸಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *