LATEST NEWS
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಉಡುಪಿ ಪೇಜಾವರ ವಿಶ್ವಪ್ರಸನ್ನ ತೀರ್ಥರ ಯೋಗ ಬೆರಗು…!!

ಉಡುಪಿ: ಉಡುಪಿ ಪೇಜಾವರ ಮಠದ ಈಗಿನ ಶ್ರೀಗಳು ತಮ್ಮ ಗುರುಗಳ ಹಾದಿಯಲ್ಲೇ ನಡೆಯುತ್ತಿದ್ದು, ಈಗಾಗಲೇ ರಾಮಮಂದಿರ ಟ್ರಸ್ಟ್ ನ ವಿಶ್ವಸ್ಥರಾಗಿಯೂ ಗುರುತರ ಜವಬ್ದಾರಿಯನ್ನು ಹೊತ್ತಿರುವ ಅವರು ತಾವೊಬ್ಬ ಅತ್ಯುತ್ತಮ ಯೋಗಪಟು ಎಂದು ತೊರಿಸಿಕೊಟ್ಟಿದ್ದಾರೆ. ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀ ಯೋಗಾಭ್ಯಾಸದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಗಳು ,ಪೇಜಾವರ ಮಠ ಮತ್ತದರ ಅಡಿಯಲ್ಲಿ ಬರುವ ಹಲವು ಧಾರ್ಮಿಕ ಶೈಕ್ಷಣಿಕ ಸಂಸ್ಥೆಗಳನ್ನು ಮುನ್ನಡೆಸುತ್ತಿದ್ದಾರೆ.ಇವೆಲ್ಲದ ಜೊತೆಗೆ ಇವರು ರಾಮಮಂದಿರ ಟ್ರಸ್ಟ್ ನ ವಿಶ್ವಸ್ಥರಾಗಿಯೂ ಗುರುತರ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಈ ನಡುವೆ ಕೇವಲ ಅಧ್ಯಾತ್ಮಕ್ಕಷ್ಟೇ ಸೀಮಿತ ಎಂದುಕೊಳ್ಳದೇ ಪೇಜಾರವ ವಿಶ್ವಪ್ರಸನ್ನರು ತಾವೊಬ್ಬ ಯೋಗಪಟು ಎಂದು ತೋರಿಸಿಕೊಟ್ಟಿದ್ದಾರೆ.

ಅವರು ಪ್ರತಿದಿನವೂ ಯೋಗಾಭ್ಯಾಸವನ್ನು ತಮ್ಮ ದಿನಚರಿಯ ಭಾಗವಾಗಿ ಮಾಡಿಕೊಂಡಿದ್ದಾರೆ.ಯೋಗದಿನದಂದು ಶ್ರೀಗಳು ಮಾಡಿದ ಯೋಗಭಂಗಿಗಳು ಅವರ ಭಕ್ತರು, ಅಭಿಮಾನಿಗಳು ಹಾಗೂ ಯೋಗಪ್ರಿಯರನ್ನು ಪುಳಕಗೊಳಿಸಿವೆ.ಶೀರ್ಷಾಸನದ ಜೊತೆಗೆ ಎರಡೂ ಕೈಗಳನ್ನು ನೆಲಕ್ಕೆ ಒತ್ತಿಕೊಂಡು ಹತ್ತು ಮೀಟರ್ ಸಾಗಿದ ಅವರ ಭಂಗಿ ಸಾಮಾಜಿಕ ಜಾಲತಾಣಗಳಲ್ಲೂ ಸದ್ಯ ಸಖತ್ ವೈರಲ್ ಆಗುತ್ತಿವೆ.