LATEST NEWS
ನನಗೆ ಮಕ್ಕಳಿರುವುದು ಸಾಭೀತಾದರೆ ಪೀಠ ತ್ಯಾಗ – ಪೇಜಾವರ ಶ್ರೀ ಪತ್ರಿಕಾ ಹೇಳಿಕೆ

ನನಗೆ ಮಕ್ಕಳಿರುವುದು ಸಾಭೀತಾದರೆ ಪೀಠ ತ್ಯಾಗ – ಪೇಜಾವರ ಶ್ರೀ ಪತ್ರಿಕಾ ಹೇಳಿಕೆ
ಉಡುಪಿ ಜುಲೈ 23: ನನಗೆ ಮಕ್ಕಳಿರುವುದು ಸಾಭೀತಾದರೆ ನಾನು ಪೀಠ ತ್ಯಾಗ ಮಾಡುವೆ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥ ಸ್ವಾಮಿಜಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಇತ್ತೀಚೆಗೆ ನಿಧನರಾದ ಶಿರೂರು ಮಠಾಧೀಶ ಲಕ್ಷ್ಮೀವರ ತೀರ್ಥ ಸ್ವಾಮಿಜಿ ಅವರ ಸಂಭಾಷಣೆ ನಡೆಸಿದ್ದ ಆಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದರಲ್ಲಿ ಶಿರೂರು ಶ್ರೀಗಳು ಪೇಜಾವರ ಶ್ರೀಗಳಿಗೆ ಸಂಬಂಧಿಸಿದಂತೆ ಹಲವಾರು ಮಹತ್ವದ ಸಂಭಾಷಣೆಗಳು ನಡೆದಿದ್ದವು.

ಶಿರೂರು ಸ್ವಾಮಿಜಿ ಅವರ ಆರೋಪಿಗಳಿಗೆ ಚೆನೈ ನಲ್ಲಿರುವ ಪೇಜಾವರ ಶ್ರೀಗಳು ಪತ್ರಿಕಾ ಹೇಳಿಕೆಯನ್ನು ಬಿಡುಗಡೆಗೊಳಿಸಿ ಉತ್ತರಿಸಿದ್ದಾರೆ, ಶಿರೂರು ಲಕ್ಷ್ಮೀವರ ತೀರ್ಥರ ಆರೋಪಿಗಳಿಗೆ ಪ್ರತಿಕ್ರಿಯಿಸಿರುವ ಪೇಜಾವರ ಶ್ರೀಗಳು ನನಗೆ ಮಕ್ಕಳಿರೋದು ಸಿದ್ದವಾದರೆ ಪೀಠತ್ಯಾಗ ಮಾಡುವೆ ಎಂದು ಹೇಳಿದ್ದಾರೆ.
ತಾರುಣ್ಯದಲ್ಲಿ ಸ್ತ್ರೀ ಸಂಘವಿತ್ತು ಅನ್ನೋದು ಸುಳ್ಳು, ತಮಿಳ್ನಾಡಿನಲ್ಲಿ ನನಗೆ ಮಗಳಿದ್ದಾಳೆ ಅನ್ನೋದು ಶುದ್ದಸುಳ್ಳು. ಇದೇ ರೀತಿ ಈ ಹಿಂದೆ ಕೂಡ ಇದೇ ಅಭಿಪ್ರಾಯ ಹೇಳಿ ಕೆಲವರು ಪತ್ರ ಬರೆದಿದ್ದರು, ಅದರಲ್ಲಿ ನನಗೆ ಗಂಡುಮಗು ಇದೆ ಎಂದು ಬರೆಯಲಾಗಿತ್ತು, ಇವೆಲ್ಲಾ ಕೇವಲ ಕಲ್ಪನೆಯಾಗಿದ್ದು, ದೇಶದ ಯಾವ ಜನರು ಇದನ್ನು ನಂಬುವುದಿಲ್ಲ ಎಂದು ತಿಳಿಸಿದ್ದಾರೆ.
ಚೆನೈ ನಿಂದ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಪೇಜಾವರ ಶ್ರೀಗಳು ನನ್ನ ಮೇಲಿನ ಆರೋಪಕ್ಕೆ ನಾನು ಯಾವುದೇ ಪರೀಕ್ಷೆ ಸಿದ್ದನಾಗಿದ್ದು ಯಾವುದೇ ವಿಚಾರಣೆ ಎದುರಿಸಲು ನಾನು ಸಿದ್ದ ಎಂದು ತಿಳಿಸಿದ್ದಾರೆ.
ಶೀರೂರು ಬಗ್ಗೆ ನಾನು ಪುತ್ರಿಕಾಗೋಷ್ಠಿಯಲ್ಲಿ ಹೇಳಿದ ನನ್ನ ಹೇಳಿಕೆ ಯನ್ನು ಕೆಲವರು ಆಕ್ಷೇಪಿಸಿದ್ದಾರೆ, ಆದರೆ ನಾನು ಕೇವಲ ಮಾಧ್ಯಮ ದವರ ಪ್ರಶ್ನೆಗೆ ನಾನು ಉತ್ತರ ನೀಡಿದ್ದಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ.
ರಘುವಲ್ಲಭ ತೀರ್ಥ, ಮನೋಜ್ಞ ತೀರ್ಥ, ಸುಬ್ರಹ್ಮಣ್ಯದ ಸ್ವಾಮೀಜಿಗಳ ಪೀಠತ್ಯಾಗದಲ್ಲಿ ನನ್ನ ಪಾತ್ರವಿಲ್ಲ ಅಲ್ಲದೆ ವಿಶ್ವವಿಜಯರನ್ನು ನಾನು ಕಳುಹಿಸಿಯೇ ಇಲ್ಲ, ಅವರಾಗಿಯೇ ಹೋದರು ನನಗೆ ತಿಳಿಸದೆ ಪೀಠತ್ಯಾಗ ಮಾಡಿದ್ದರು ಎಂದು ಎಲ್ಲಾ ಸಮಸ್ಯೆಗಳಿಗೆ ನನ್ನನ್ನು ದೂಷಿಸುವುದು ಸರಿಯಲ್ಲ ಎಂದು ತಿಳಿಸಿದರು.
ಶೀರೂರು ಸ್ವಾಮೀಜಿಯಿಂದ ನಾನು ಯಾವುದೇ ಹಣ ಅಪೇಕ್ಷಿಸಿಲ್ಲ ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಹಿರಂಗ ವಿಚಾರಣೆಗೆ ನಾನು ಸದಾ ಸಿದ್ದ ಪೇಜಾವರ ಶ್ರೀ ಪತ್ರಿಕಾ ಹೇಳಿಕೆ ನೀಡಿದ್ದಾರೆ.