Connect with us

    LATEST NEWS

    ಶಬರಿಮಲೆ ದೇವಸ್ಥಾನ ಮಹಿಳೆಯ ಪ್ರವೇಶದ ಬಗ್ಗೆ ನಾನು ಪ್ರತಿಕ್ರಿಯೆ ನೀಡಲಾರೆ- ಪೇಜಾವರ ಶ್ರೀ

    ಶಬರಿಮಲೆ ದೇವಸ್ಥಾನ ಮಹಿಳೆಯ ಪ್ರವೇಶದ ಬಗ್ಗೆ ನಾನು ಪ್ರತಿಕ್ರಿಯೆ ನೀಡಲಾರೆ- ಪೇಜಾವರ ಶ್ರೀ

    ಉಡುಪಿ ಅಕ್ಟೋಬರ್ 14: ಶಬರಿಮಲೆ ದೇವಸ್ಥಾನಕ್ಕೆ ಎಲ್ಲಾ ವಯೋಮಿತಿಯ ಮಹಿಳೆಯರ ಪ್ರವೇಶ ವಿಚಾರದ ಬಗ್ಗೆ ನಾನೇನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಪೇಜಾವರ ಶ್ರೀಗಳು ಪ್ರತಿಕ್ರಿಯಿಸಿದ್ದಾರೆ.

    ಉಡುಪಿಯಲ್ಲಿ ಮಾತನಾಡಿದ ಅವರು ಶಬರಿಮಲೆಗೆ ಮಹಿಳೆಯರು ಪ್ರವೇಶಿಸದರೆ ನನಗೆ ಯಾವುದೇ ಆಕ್ಷೇಪ ಇಲ್ಲ, ಮಹಿಳೆಯರು ನಮ್ಮಲ್ಲಿ ಕೃಷ್ಣ ದೇವರ ದರ್ಶನಕ್ಕೆ ಬರ್ತಾರೆ, ಶಿವ ದೇವಸ್ಥಾನಕ್ಕೂ, ಸುಬ್ರಹ್ಮಣ್ಯ ದೇವಸ್ಥಾನಕ್ಕೂ ಪ್ರವೇಶ ಇದೆ ಎಂದು ಹೇಳಿದ ಅವರು ಈ ವಿಚಾರದಲ್ಲಿ ನಾನು‌ ಮಧ್ಯ ಪ್ರವೇಶಿಸುದಿಲ್ಲ ಎಂದರು.

    ಶಬರಿಮಲೆ ದೇವಸ್ಥಾನದ ಸಂಪ್ರದಾಯ ಬೇರೆಯೇ ಇದೆ, ಈ ಹಿನ್ನಲೆಯಲ್ಲಿ ಈ ವಿಚಾರದ ಬಗ್ಗೆ ನ್ಯಾಯಾಲಯ ಇದೆ, ಅರ್ಚಕರಿದ್ದಾರೆ, ಭಕ್ತರಿದ್ದಾರೆ, ಅಲ್ಲಿನ ರಾಜರಿದ್ದಾರೆ, ಶಬರಿಮಲೆ ವಿಚಾರ ಅವರೇ ನೋಡ್ತಾರೆ ಎಂದು ಹೇಳಿದರು. ಅಲ್ಲದೆ ಮತ್ತೊಂದು ದೇವಾಲಯದ ಸಂಪ್ರದಾಯದ ಬಗ್ಗೆ ಮಾತನಾಡೋದು ಸರಿಯಲ್ಲ ಎಂದು ತಿಳಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply