LATEST NEWS
ನಟ ಅರ್ಜುನ್ ಸರ್ಜಾ ನಿರ್ಮಿಸಿರುವ ಆಂಜನೇಯ ಮೂರ್ತಿ ಪ್ರತಿಷ್ಠಾಪನೆಯಲ್ಲಿ ಪಾಲ್ಗೊಂಡ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮಿಜಿ

ಚೆನ್ನೈ : ನಟ ಅರ್ಜುನ್ ಸರ್ಜಾ ತಮಿಳುನಾಡಿನ ಚೆನ್ನೈನಲ್ಲಿ ನಿರ್ಮಿಸಿರುವ ರಾಮ ಮತ್ತು ಆಂಜನೇಯನ ದೇವಸ್ಥಾನದ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕ ಪ್ರಕ್ರಿಯೆಯಲ್ಲಿ ಉಡುಪಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭಾಗಿಯಾಗಿದ್ದಾರೆ.
ಅಯೋಧ್ಯೆ ಪ್ರವಾಸದಲ್ಲಿದ್ದ ಪೇಜಾವರ ಶ್ರೀಗಳನ್ನು ಅರ್ಜುನ್ ಸರ್ಜಾ ತಮಿಳುನಾಡಿಗೆ ಕರೆಸಿ ದೇವರಿಗೆ ಕುಂಬಾಭಿಷೇಕ ಮಾಡಿಸಿದ್ದಾರೆ. ಎರಡು ದಿನಗಳ ಕಾಲ ನಡೆದ ಧಾರ್ಮಿಕ ವಿಧಿ ವಿಧಾನದಲ್ಲಿ ಅವಧೂತ ವಿನಯ್ ಗುರೂಜಿ ಕೂಡ ಪಾಲ್ಗೊಂಡಿದ್ದರು.

ಪೇಜಾವರ ಸ್ವಾಮೀಜಿ ಭಗವಾನ್ ಆಂಜನೇಯ ದೇವರ ಬೃಹತ್ ವಿಗ್ರಹಕ್ಕೆ ಜೇನು, ತುಪ್ಪ ಸಕ್ಕರೆಯ, ಅಭಿಷೇಕವನ್ನು ಮಾಡಿಸಿ, ಪ್ರಾರ್ಥನೆ ಜೊತೆ ಹೂವಿನ ಪಕಳಗಳ ಅಭಿಷೇಕಗೈದರು. ಚೆನ್ನೈನಲ್ಲಿ ಪೇಜಾವರ ಮಠದ ಶಾಖೆ ಇದೆ. ಸರ್ಜಾ ಕುಟುಂಬ ವಿಶ್ವೇಶತೀರ್ಥರ ಕಾಲದಿಂದಲೂ ಪೇಜಾವರ ಮಠದ ಜೊತೆ ಸಂಬಂಧ ಹೊಂದಿದೆ.