Connect with us

    LATEST NEWS

    ಕೇಂದ್ರ ಸರಕಾರದ ವಿರುದ್ದ ಬೇಸರ ವ್ಯಕ್ತಪಡಿಸಿದ ಪೇಜಾವರ ಶ್ರೀ

    ಕೇಂದ್ರ ಸರಕಾರದ ವಿರುದ್ದ ಬೇಸರ ವ್ಯಕ್ತಪಡಿಸಿದ ಪೇಜಾವರ ಶ್ರೀ

    ಉಡುಪಿ ಜೂನ್ 1 : ಕೇಂದ್ರ ಬಿಜೆಪಿ ಸರಕಾರದಿಂದ ನಿರೀಕ್ಷೆಯ ಸಾಧನೆಗಳು ಆಗಲಿಲ್ಲ ಎಂಬ ಬೇಸರವಿದೆ ಎಂದು ಪೇಜಾವರ ಶ್ರೀಗಳು ತಿಳಿಸಿದ್ದಾರೆ.

    ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಮೋದಿ ಸರ್ಕಾರದಿಂದ ಸಾಕಷ್ಟು ಕೆಲಸ ಆಗಿದೆ, ಆದರೆ ಕೇಂದ್ರ ಸರ್ಕಾರದ ಮೇಲೆ ಬಗ್ಗೆ ನಿರೀಕ್ಷೆ ಬಹಳ ಇತ್ತು, ಆ ನಿರೀಕ್ಷೆಯಷ್ಟು ಸಾಧನೆಗಳು ಆಗಲಿಲ್ಲ ಎಂಬ ಬೇಸರವಿದೆ ಎಂದರು. ರಾಮ ಮಂದಿರ ಕ್ಕಿಂತ ಮೊದಲು ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕು, ಗಂಗಾ ಶುದ್ಧೀಕರಣ ಸಂಪೂರ್ಣವಾಗಿ ಆಗಿಲ್ಲ ಎಂದು ಪೇಜಾವರ ಶ್ರೀಗಳು ಹೇಳಿದರು.

    ವಿದೇಶದಿಂದ ಕಪ್ಪು ಹಣವನ್ನು ದೇಶಕ್ಕೆ ತರುತ್ತೇನೆ ಎಂದಿದ್ದ ಪ್ರಧಾನಿ ಮೋದಿ ಅವರು ಇಲ್ಲಿಯವರೆಗೆ ಕಪ್ಪು ಹಣವನ್ನು ದೇಶಕ್ಕೆ ತರಿಸಿಲ್ಲ, ದೇಶದ ಜನಕ್ಕೆ ಹಾಗೂ ನಮಗೆ ಮೋದಿ ಸರಕಾರದ ಮೇಲೆ ಬಹಳ ನಿರೀಕ್ಷೆಯಿತ್ತು ಎಂದರು. ದೇಶದಲ್ಲಿ ವಿಪಕ್ಷಗಳಲ್ಲಿ ಐಕ್ಯತೆ ಮೂಡಿದ ಬಗ್ಗೆ ಮಾತನಾಡಿದ ಅವರು ಈ ಹಿಂದೆ ಇಂದಿರಾ ಗಾಂಧಿಗೂ ಹೀಗೇ ಆಗಿತ್ತು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಇದರ ಪರಿಣಾಮ ಆಗಬಹುದು ಎಂದರು, ಈ ಹಿನ್ನಲೆಯಲ್ಲಿ ಕೇಂದ್ರ ಸರಕಾರ ಚುನಾವಣೆಗೂ ಮೊದಲು ತಾವು ನೀಡಿದ ಆಶ್ವಾಸನೆ ಕೆಲಸವನ್ನು ಮಾಡಿ ತೋರಿಸಬೇಕು ಎಂದರು.

    ಸಿಎಂ ಕುಮಾರಸ್ವಾಮಿ ಅವರು ಅನುಭವಿ ರಾಜಕಾರಣಿ, ರಾಜ್ಯ ಸರ್ಕಾರ ಪೂರ್ಣಾವಧಿ ಅಧಿಕಾರ ಮಾಡಲಿ ಎಂದು ಹಾರೈಸ್ತೇನೆ ಎಂದು ಪೇಜಾವರು ಶ್ರೀಗಳು ಹೇಳಿದ್ದಾರೆ. ರಾಜಕೀಯ ಪಕ್ಷಗಳು ಪ್ರಜಾಪ್ರಭುತ್ಚದ ವಿಕೃತಿಯಾಗಿದ್ದು, ರಾಜಕಾರಣಿಗಳು ರೆಸಾರ್ಟ್, ಆಪರೇಷನ್ ನಲ್ಲಿ ತಲ್ಲೀನರಾಗಿದ್ದಾರೆ. ದೇಶದ ಯಾವುದೇ ರಾಜಕೀಯ ಪಕ್ಷಗಳು ನೈತಿಕತೆ ಹೊಂದಿಲ್ಲ ಎಂದರು.

    ರಾಜ್ಯದಲ್ಲಿ ರಾಜಕಾರಣದಲ್ಲಿ ಗೊಂದಲಗಳು ನಿರ್ಮಾಣವಾದರೆ ಸರ್ವಪಕ್ಷಗಳ ಸರಕಾರ ಬರಲಿ ಎಂದ ಹೇಳಿದ ಪೇಜಾವರ ಶ್ರೀಗಳು, ಆದರೆ ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತ ಬೇಡ ಎಂದರು. ಸರ್ವ ಪಕ್ಷ ಸರ್ಕಾರ ಜಾರಿಯಂತಹ ಪ್ರಯೋಗ ರಾಜ್ಯದಲ್ಲಿ ನಡೆಯಬೇಕು. ಈ ರೀತಿಯ ಇಂತಹ ಆದರ್ಶಮಂತ್ರಿ ಮಂಡಲ ರಚನೆಯಾಗಲಿ ಎಂದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *