LATEST NEWS
ಬಾವಿಗೆ ಬಿದ್ದ ಬೆಕ್ಕಿನ ಮರಿಯ ರಕ್ಷಿಸಿದ ಪೇಜಾವರ ಸ್ವಾಮೀಜಿ

ಉಡುಪಿ, ಜೂನ್ 19: ಮುಚ್ಲಕೋಡಿನ ದೇವಸ್ಥಾನದ ಬಾವಿಗೆ ಬಿದ್ದಿದ್ದ ಬೆಕ್ಕಿನ ಮರಿಯನ್ನು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸ್ವತಃ ಬಾವಿಗಿಳಿದು ರಕ್ಷಣೆ ಮಾಡಿದ್ದಾರೆ.
ಭಾನುವಾರ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಬೆಕ್ಕಿನ ಮರಿ 40 ಅಡಿ ಆಳದ ಬಾವಿಗೆ ಬಿದ್ದಿರುವುದನ್ನು ಕಂಡ ಸ್ವಾಮೀಜಿ ಹಗ್ಗಕ್ಕೆ ಬಕೆಟ್ ಕಟ್ಟಿ ಮೇಲೆತ್ತಲು ಪ್ರಯತ್ನಿಸಿದರು.

ಆದರೆ, ಗಾಬರಿಗೊಂಡಿದ್ದ ಬೆಕ್ಕಿನ ಮರಿ ಬಕೆಟ್‌ನಲ್ಲಿ ಬರಲಿಲ್ಲ. ಕೊನೆಗೆ ಸ್ವಾಮೀಜಿಯೇ ಹಗ್ಗದ ಸಹಾಯದಿಂದ ಬಾವಿಗಿಳಿದು ಬೆಕ್ಕಿನ ಮರಿಯನ್ನು ಮೇಲೆತ್ತಿದರು.
Continue Reading