LATEST NEWS
ರನ್‌ವೇಯಿಂದ ಜಾರಿ ಸಮುದ್ರದತ್ತ ನುಗ್ಗಿದ ವಿಮಾನ: ತಪ್ಪಿದ ಭಾರಿ ದುರಂತ
ರನ್‌ವೇಯಿಂದ ಜಾರಿ ಸಮುದ್ರದತ್ತ ನುಗ್ಗಿದ ವಿಮಾನ: ತಪ್ಪಿದ ಭಾರಿ ದುರಂತ
ಅಂಕರ, ಜನವರಿ 14 : ವಿಮಾನವೊಂದು ಭೂಸ್ಪರ್ಶವಾದ ಕೆಲವೇ ಸೆಕೆಂಡುಗಳಲ್ಲಿ ರನ್‌ವೇಯಿಂದ ಜಾರಿ ಕೆಲವು ಅಡಿಗಳಷ್ಟು ತಗ್ಗು ಪ್ರದೇಶಕ್ಕೆ ಸರಿದಿದ್ದು ಸಮುದ್ರಕ್ಕೆ ಬೀಳುವುದರಿಂದ ಸ್ವಲ್ಪದರಲ್ಲೇ ಪಾರಾದ ಘಟನೆ ಉತ್ತರ ಟರ್ಕಿಯ ಟ್ರಬ್ಜೊನ್ ವಿಮಾನ ನಿಲ್ದಾಣದಲ್ಲಿ ಸಂಭವಿಸಿದೆ.
ಪೆಗಾಸಸ್ ಏರ್‌ಲೈನ್ಸ್‌ಗೆ ಸೇರಿದ ವಿಮಾನದಲ್ಲಿ 162 ಮಂದಿ ಪ್ರಯಾಣಿಕರು, ಇಬ್ಬರು ಪೈಲಟ್ ಮತ್ತು ನಾಲ್ವರು ಸಿಬ್ಬಂದಿ ಇದ್ದರು.
ವಿಮಾನ ಅಂಕಾರದಿಂದ ಹೊರಟು ಟ್ರಬ್ಜೊನ್ ವಿಮಾನ ನಿಲ್ದಾಣದಲ್ಲಿ ಇಳಿಯಲಿತ್ತು. ಘಟನೆಯಲ್ಲಿ ಯಾವುದೇ ಸಾವು, ನೋವು ಸಂಭವಿಸಿಲ್ಲ.
ವಿಮಾನ ನಿಲ್ದಾಣದ ಕೆಳಭಾಗದಲ್ಲಿ ಸಮುದ್ರವಿದೆ.
ರನ್‌ವೇಯಿಂದ ಜಾರಿದ ವಿಮಾನ ತಲೆಕೆಳಗಾಗಿ ಸಮುದ್ರದತ್ತ ಜಾರಿದೆ. ವಿಮಾನದ ಚಕ್ರಗಳು ಮಣ್ಣಿನಲ್ಲಿ ಹೂತಿವೆ.
ಇಲ್ಲದಿದ್ದಲ್ಲಿ ವಿಮಾನ ಸಮುದ್ರಕ್ಕೆ ಬೀಳುವ ಅಪಾಯವಿತ್ತು. ಎಲ್ಲರನ್ನೂ ವಿಮಾನದಿಂದ ಸುರಕ್ಷಿತವಾಗಿ ಹೊರ ಕರೆತರಲಾಗಿದೆ.