Connect with us

LATEST NEWS

2 ಕೋಟಿ ಮೌಲ್ಯದ 28 ಲಕ್ಷ ನವಿಲು ಗರಿ ಚೀನಾಕ್ಕೆ ಸ್ಮಗ್ಲಿಂಗ್….!!

ಮುಂಬೈ ಫೆಬ್ರವರಿ 15: ಮುಂಬೈನ ಕಳ್ಳಸಾಗಣೆ ನಿಗ್ರಹ ದಳ ಬೃಹತ್ ನವಿಲು ಗರಿ ಸ್ಮಗ್ಲಿಂಗ್ ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ. ಭಾರತದಿಂದ ಚೀನಾಕ್ಕೆ ಬರೋಬ್ಬರಿ 28 ಲಕ್ಷ ನವಿಲುಗರಿಗಳನ್ನು ಅಕ್ರಮವಾಗಿ ಸಾಗಾಟ ಮಾಡಲು ಯತ್ನಿಸುತ್ತಿದ್ದ ಪ್ರಕರಣವನ್ನು ಮುಂಬೈ ವಲಯದ ಕಳ್ಳಸಾಗಣೆ ನಿಗ್ರಹ ದಳವಾದ ಡೈರೆಕ್ಟೋರೇಟ್‌ ಆಫ್‌ ರೆವಿನ್ಯೂ ಇಂಟೆಲಿಜೆನ್ಸ್‌ (ಡಿಆರ್‌ ಐ) ಅಧಿಕಾರಿಗಳು ಪತ್ತೆ ಹಚ್ಚಿ, ನವೀಲುಗರಿಗಳನ್ನು ವಶಪಡಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.


ಜವಾಹರಲಾಲ್‌ ನೆಹರು ಬಂದರು ಅಥಾರಿಟಿ ಮೂಲಕ “ಡೋರ್‌ ಮ್ಯಾಟ್‌ ತೆಂಗಿನ ನಾರು” ಎಂದು ಸುಳ್ಳು ಹೇಳಿ ನವಿಲುಗರಿಯನ್ನು ರಫ್ತು ಮಾಡಲು ಬಂಡಲ್‌ ಮಾಡಿ ಇಡಲಾಗಿತ್ತು. ಆದರೆ ಡಿಆರ್‌ ಐಗೆ ಲಭಿಸಿದ ಮಾಹಿತಿ ಮೇರೆಗೆ ಸರಕು ರವಾನೆಯನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಅಂದಾಜು 28 ಲಕ್ಷ ನವಿಲು ಗರಿ ಪತ್ತೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

1962ರ ಕಸ್ಟಮ್ಸ್‌ ಕಾಯ್ದೆಯ ಸೆಕ್ಷನ್‌ 110ರ ಅನ್ವಯ ಸುಮಾರು 2.10 ಕೋಟಿ ರೂಪಾಯಿ ಮೌಲ್ಯದ ನವಿಲುಗರಿಯನ್ನು ವಶಪಡಿಸಿಕೊಳ್ಳಲಾಗಿದೆ. 1972ರ ವನ್ಯಜೀವಿ ರಕ್ಷಣಾ ಕಾಯ್ದೆಯ ಶೆಡ್ಯೂಲ್‌ 2ರ ಪ್ರಕಾರ ನವಿಲುಗರಿ ರಫ್ತು ನಿಷೇಧಿಸಲಾಗಿತ್ತು.
ನವಿಲು ಗರಿ ಕಳ್ಳಸಾಗಣೆ ಮಾಡುತ್ತಿರುವುದನ್ನು ಬಂಧಿತ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಆರೋಪಿಗಳನ್ನು ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟಿಯನ್‌ ಕೋರ್ಟ್‌ ಗೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿರುವುದಾಗಿ ವರದಿ ತಿಳಿಸಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *