Connect with us

LATEST NEWS

ಇದೆಂತಹ ಕ್ರೌರ್ಯ..? ಸುಖ ನಿದ್ದೆಗೆ ಭಂಗ, 5 ನಾಯಿಮರಿಗಳನ್ನು ಜೀವಂತವಾಗಿ ಸುಟ್ಟು ಹಾಕಿದ ಸೇನಾಧಿಕಾರಿ, ಸಿಬಂದಿ ಪತ್ನಿಯರು..!!

ಸುಖ ನಿದ್ದೆಗೆ ತೊಂದರೆ  ಆಗುವ ನೆಪದಲ್ಲಿ ಸೇನಾಧಿಕಾರಿ ಪತ್ನಿ ಹಾಗೂ CISF ಸಿಬ್ಬಂದಿಯೊಬ್ಬರ ಪತ್ನಿ 5 ಪುಟ್ಟ ನಾಯಿ ಮರಿಗಳನ್ನು ಜೀವಂತವಾಗಿ ಸುಟ್ಟ ಹೇಯಾ ಕೃತ್ಯ ಮೀರಾತ್ ನಲ್ಲಿ ಬೆಳಕಿಗೆ ಬಂದಿದೆ.

ಮೀರಠ್: ಸುಖ ನಿದ್ದೆಗೆ ತೊಂದರೆ  ಆಗುವ ನೆಪದಲ್ಲಿ ಸೇನಾಧಿಕಾರಿ ಪತ್ನಿ ಹಾಗೂ CISF ಸಿಬ್ಬಂದಿಯೊಬ್ಬರ ಪತ್ನಿ 5 ಪುಟ್ಟ ನಾಯಿ ಮರಿಗಳನ್ನು ಜೀವಂತವಾಗಿ ಸುಟ್ಟ ಹೇಯಾ ಕೃತ್ಯ ಮೀರಾತ್ ನಲ್ಲಿ ಬೆಳಕಿಗೆ ಬಂದಿದೆ.

 

ಖಂಕರ್ ಖೇರಾ ಪೊಲೀಸ್ ಠಾಣೆ ವ್ಯಾಪ್ತಿಯ ಸಂತನಗರ ಕಾಲೊನಿಯಲ್ಲಿ ಗುರುವಾರ ಬೆಳಿಗ್ಗೆ ಈ ಪ್ರಕರಣ ಬೆಳಕಿಗೆ ಬಂದಿದೆ. ಪ್ರಾಣಿ ದಯಾ ಸಂಘದವರು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ ಬಳಿಕ ಇಬ್ಬರು ಮಹಿಳೆಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಾಯಿ ಮರಿಗಳು ರಾತ್ರಿಯ ವೇಳೆ ಬೊಗಳುವುದರಿಂದ ತಮ್ಮ ಸುಖನಿದ್ದೆಗೆ ತೊಂದರೆಯಾಗುತ್ತಿದೆ ಎಂಬ ಸಿಟ್ಟಿನಿಂದ ಸೇನಾಧಿಕಾರಿ ಮತ್ತು CISF ಸಿಬಂದಿ ಪತ್ನಿಯರಾದ ಶೋಭಾ ಮತ್ತ ಆರತಿ ಎಂಬ ಇಬ್ಬರು ಮಹಿಳೆಯರು ನಾಯಿ ಮರಿಗಳನ್ನು ಸುಟ್ಟುಹಾಕಿದರು ಎಂದು ಆನಿಮಲ್ ಕೇರ್ ಸೊಸೈಟಿ ಕಾರ್ಯದರ್ಶಿ ಅಂಶುಮಾಲಿ ವಸಿಷ್ಠ ಹೇಳಿದ್ದಾರೆ. “ಇಬ್ಬರು ಮಹಿಳೆಯರು ಮೂರು ದಿನಗಳ ಹಿಂದಷ್ಟೇ ಹುಟ್ಟಿದ್ದ ನಾಯಿಮರಿಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಇನ್ನೂ ಕಣ್ಣನ್ನು ಕೂಡಾ ತೆರೆಯದ ನಾಯಿಮರಿಗಳು ಕ್ರೌರ್ಯಕ್ಕೆ ಬಲಿಯಾಗಿವೆ. ಈ ಪ್ರಕರಣ ಬೆಳಕಿಗೆ ಬಂದ ಬಳಿಕ, ಸ್ಥಳೀಯರು ಇಬ್ಬರು ಮಹಿಳೆಯರ ಜತೆ ಜಗಳವಾಡಿದ್ದಾರೆ. ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದಾಗ, ಯಾವುದೇ ಕ್ರಮ ಕೈಗೊಳ್ಳಲು ಪೊಲೀಸರು ನಿರಾಕರಿಸಿದ್ದರು ಎಂದು ವಸಿಷ್ಠ ವಿವರಿಸಿದ್ದಾರೆ. ಬಳಿಕ ಎನಿಮಲ್ ಕೇರ್ ಸೊಸೈಟಿಯ ಪದಾಧಿಕಾರಿಗಳು ಬಂದು ಒತ್ತಡ ಹಾಕಿ ಬಳಿಕ ಪೊಲೀಸರು ಇಬ್ಬರು ಮಹಿಳೆಯ ಮೇರೆ ಪ್ರಕರಣ ದಾಖಲು ಮಾಡಿದ್ದಾರೆ.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *