LATEST NEWS
ಲಂಚಕ್ಕಾಗಿ ಬೇಡಿಕೆ ಇಟ್ಟ ಸವಣೂರು ಗ್ರಾಮ ಪಂಚಾಯತ್ತಿನ ಪಿ.ಡಿ.ಓ ವಿಡಿಯೋ ವೈರಲ್
ಲಂಚಕ್ಕಾಗಿ ಬೇಡಿಕೆ ಇಟ್ಟ ಸವಣೂರು ಗ್ರಾಮ ಪಂಚಾಯತ್ತಿನ ಪಿ.ಡಿ.ಓ ವಿಡಿಯೋ ವೈರಲ್
ಪುತ್ತೂರು ಅಗಸ್ಟ್ 19: ಸವಣೂರು ಹಾಗೂ ಬೆಳಂದೂರ್ ಗ್ರಾಮ ಪಂಚಾಯತ್ತಿನ ಪಿ.ಡಿ.ಓ ಒಬ್ಬರು ಲಂಚಕ್ಕಾಗಿ ಒತ್ತಾಯಿಸಿದ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಧಿಕಾರಿಯ ವಿರುದ್ದ ಕಾನೂನು ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸವಣೂರು ಹಾಗೂ ಬೆಳಂದರೂರು ಗ್ರಾಮದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯಾದ ನಾರಾಯಣ ಬೆತ್ತೋಡಿ ಎಂಬುವರು ಲಂಚ ಕೇಳಿದ ಅಧಿಕಾರಿ.
ಅಬ್ದುಲ್ ಹಮೀದ್ ಎನ್ನುವವರು ಸ್ಟಿರಾರ್ಜಿಯ 9/11 ಖಾತೆಗೆ ಸಂಬಂಧಿಸಿ ಮಾತನಾಡಲು ಹೋದಾಗ ಪಿಡಿಓ ನಾರಾಯಣ ಬೆತ್ತೋಡಿ ನೀವು ಇಲ್ಲಿಗೆ ಹಲವಾರು ಸಲ ಬಂದಿದ್ದೀರಿ ಆದರೆ ನನಗೇನು ಗಮ್ಮತ್ತು ಮಾಡಲಿಲ್ಲ ಎಂದು ಕೇಳಿದ್ದಾರೆ. ಈ ಸಂದರ್ಭ ಪಿಡಿಓ ಲಂಚಕ್ಕಾಗಿ ಬೇಡಿಕೆ ಇಟ್ಟ ಹಿನ್ನಲೆಯಲ್ಲಿ ಬೇರೆ ದಾರಿ ಕಾಣದೆ ಅಬ್ದುಲ್ ಹಮೀದ್ ಅವರು ಲಂಚ ನೀಡಲು ಮುಂದಾಗಿದ್ದಾರೆ. ಅಲ್ಲದೆ ಲಂಚ ನೀಡುವ ವಿಡಿಯೋ ವನ್ನು ಮೊಬೈಲ್ ನಲ್ಲಿ ಚಿತ್ರಿಕರಿಸಿದ್ದಾರೆ. ಪಿಡಿಓ ನಾರಾಯಣ ಬೆತ್ತೋಡಿ ಅವರು ಅಬ್ದುಲ್ ಹಮೀದ್ ಅವರಿಂದ ಲಂಚ ಹಣವಾಗಿ 2000 ರೂಪಾಯಿ ಯನ್ನು ಪಡೆದಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.
ಅಲ್ಲದೆ ಪಂಚಾಯತ್ ಸಿಬ್ಬಂದಿಯಾದ ಸೌಮ್ಯ ಎಂಬವರು ಅಬ್ದುಲ್ ಹಮೀದ್ ಗೆ ಕರೆ ಮಾಡಿ ನೀವು ಪಿ.ಡಿ.ಯೋ ಗೆ ದುಡ್ಡು ಕೊಡಿ ನಿಮ್ಮ ಕೆಲಸ ಬೇಗ ಆಗುತ್ತದೆ ಎಂದು ಹೇಳಿದ್ದಾರೆ ಎಂದು ಹಮೀದ್ ಅವರು ಆರೋಪಿಸಿದ್ದಾರೆ.
ಲಂಚ ಪಡೆದ ಪಿಡಿಓ ಹಾಗೂ ಲಂಚ ನೀಡಲು ಪ್ರೆರೇಪಿಸಿ ಪಂಚಾಯತ್ ಸಿಬ್ಬಂದಿ ಸೌಮ್ಯ ವಿರುದ್ದ ಇಲಾಖೆ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹಮೀದ್ ಅವರು ಆಗ್ರಹಿಸಿದ್ದಾರೆ.