LATEST NEWS
ಪರ್ಕಳ – ರಸ್ತೆ ದಾಟುತ್ತಿದ್ದ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಮೃತರಾದ ರಮೇಶ್ ನಾಯಕ್

ಉಡುಪಿ ಫೆಬ್ರವರಿ 22: ಬೀಡ ತೆಗೆದುಕೊಳ್ಳಲು ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಸಾವನಪ್ಪಿದ ಘಟಮೆ ಪರ್ಕಳ ಪೇಟೆಯ ಬಡಗುಬೆಟ್ಟು ತಿರುವಿನಲ್ಲಿ ಸಂಭವಿಸಿದೆ.
ಮೃತರನ್ನು ಶೇಡಿಗುಡ್ಡೆ ನಿವಾಸಿ ರಮೇಶ್ ನಾಯಕ್ (55) ಎಂದು ಗುರುತಿಸಲಾಗಿದೆ
ರಮೇಶ್ ನಾಯಕ್ ಅವರು ಕಾರು ಇಳಿದು ಬೀಡ ತೆಗೆದುಕೊಳ್ಳಲು ಪಕ್ಕದ ರಸ್ತೆಯಲ್ಲಿರುವ ಅಂಗಡಿಗೆ ರಸ್ತೆ ದಾಟಲು ಪ್ರಯತ್ನಿಸುತ್ತಿದ್ದಾಗ ವೇಗವಾಗಿ ಬಂದ ಕಾರೊಂದು ಅವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ರಮೇಶ್ ನಾಯಕ್ ಅವರನ್ನು ಕಾರು ಸುಮಾರು ದೂರದವರೆಗೆ ಎಳೆದುಕೊಂಡು ಹೋಗಿದೆ. ಈ ವೇಳೆ ಅವರ ತಲೆಗೆ ಗಂಭೀರವಾದ ಗಾಯವಾಗಿದ್ದು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸ್ಥಳವು ಅಪಾಯಕಾರಿ ತಾಣವಾಗಿ ಮಾರ್ಪಟ್ಟಿದ್ದು, ಇಲ್ಲಿ ಪದೇ ಪದೇ ಅಪಘಾತ ಪ್ರಕರಣಗಳು ವರದಿಯಾಗುತ್ತಿವೆ.
