LATEST NEWS
ಪರೇಶ್ ಮೇಸ್ತ ಸಾವು ವ್ಯವಸ್ಥಿತ ಕೊಲೆ – ವಿಎಚ್ ಪಿ ಮುಖಂಡ ಗೋಪಾಲ್ ಜೀ
ಪರೇಶ್ ಮೇಸ್ತ ಸಾವು ವ್ಯವಸ್ಥಿತ ಕೊಲೆ – ವಿಎಚ್ ಪಿ ಮುಖಂಡ ಗೋಪಾಲ್ ಜೀ
ಉಡುಪಿ ಡಿಸೆಂಬರ್ 12: ಹೊನ್ನಾವರದಲ್ಲಿ ನಡೆದ ಹಿಂದೂ ಕಾರ್ಯಕರ್ತರ ಪರೇಶ್ ಮೇಸ್ತ ಸಾವು ಇದೊಂದು ವ್ಯವಸ್ಥಿತ ಕೊಲೆ ಎಂದು ವಿಶ್ವಹಿಂದೂ ಪರಿಷತ್ ಮುಖಂಡ ಗೋಪಾಲ್ ಜೀ ಆರೋಪಿಸಿದ್ದಾರೆ.
ಉಡುಪಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಹಿಂದೂ ಕಾರ್ಯಕರ್ತ ಪರೇಶ್ ಮೇಸ್ತ ಕೊಲೆ ಕತ್ಯದ ಹಿಂದೆ ಅಜಾದ್ ಅಣ್ಣೆಗೇರಿ ಎಂಬವನಿದ್ದಾನೆ ಎಂದು ಆರೋಪಿಸಿದರು. ಈ ಆಜಾದ್ ಕಾಂಗ್ರೇಸ್ ಮುಖಂಡನಾಗಿದ್ದು ಜಿಹಾದಿ ಚಟುವಟಿಕೆ ಬೆಂಬಲ ನೀಡುತ್ತಿದ್ದಾನೆ ಎಂದು ಆರೋಪಿಸಿದರು. ಸಿಎಂ ಸಿದ್ದರಾಮಯ್ಯ ಉತ್ತರ ಕನ್ನಡ ಭೇಟಿ ವೇಳೆ ಇತನ ಕೈಯಿಂದಲೇ ಸಿಎಂಗೆ ಸನ್ಮಾನ ಮಾಡಿಸಿಕೊಂಡಿದ್ದಾರೆ ಎಂದು ಹೇಳಿದರು.
ಪೊಲೀಸರು ರಾಜಕೀಯ ಒತ್ತಡದಿಂದ ಮುಸ್ಲಿಮರ ಜೊತೆ ಕೈ ಜೋಡಿಸಿದ್ದಾರೆ ಎಂದು ಆರೋಪಿಸಿದರು. ಮೇಸ್ತ ಹತ್ಯೆಗೈಯಾಗುವಲ್ಲಿ ಸಂಪೂರ್ಣ ಪೊಲೀಸರ ವೈಫಲ್ಯವೂ ಎದ್ದು ಕಾಣುತ್ತಿದೆ ಎಂದು ಹೇಳಿದರು. ಸಿಎಂ ಉತ್ತರ ಕನ್ನಡ ಆಗಮನ ಹಿನ್ನೆಲೆಯಲ್ಲಿ ಸಾವಿನ ಸುದ್ದಿ ಮುಚ್ಚಿಡಲಾಗಿತ್ತು, ಈ ಹಿಂದೆ ಶರತ್ ಮಡಿವಾಳ ಹತ್ಯೆ ಸಂದರ್ಭವೂ ಸರಕಾರ ಈ ರೀತಿ ನಡೆದುಕೊಂಡಿತ್ತು ಎಂದು ಹೇಳಿದರು.
ಪರೇಶ್ ಮೇಸ್ತ ಸಾವಿನಿಂದ ಇಲ್ಲಿಯವರೆಗೆ ರಾಜ್ಯದಲ್ಲಿ 20 ಹಿಂದೂ ಕಾರ್ಯಕರ್ತರ ಹತ್ಯೆ ನಡೆದಂತಾಗಿದೆ ಎಂದು ತಿಳಿಸಿದರು. ಪೊಲೀಸರು ಹಾಗೂ ಅಧಿಕಾರಿಗಳು ಸರಕಾರದ ಒತ್ತಡಕ್ಕೆ ಮಣಿದು ಸಹಜ ಸಾವು ಎಂದು ವರದಿ ನೀಡಿದ್ದಾರೆ ಎಂದು ಹೇಳಿದ ಗೋಪಾಲ್ ಜೀ , ಪರೇಶ್ ಮೇಸ್ತ ನನ್ನು ಕೊಂದು ಕೆರೆಗೆ ಎಸೆಯಲಾಗಿದೆ ಎಂದು ಹೇಳಿದರು.
ಪರೇಶ್ ಮೇಸ್ತ ಹತ್ಯೆಯನ್ನು ಖಂಡಿಸಿ ಹಾಗೂ ಪ್ರಕರಣದ ತನಿಖೆಯನ್ನು ಎನ್ ಐಗೆ ಒಪ್ಪಿಸುವಂತೆ ಒತ್ತಾಯಿಸಿ ರಾಜ್ಯಾದ್ಯಂತ 13 ಹಾಗೂ 14 ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.