Connect with us

    LATEST NEWS

    ಪಂಜಾಬ್ – ಬಟಿಂಡಾ ಮಿಲಿಟರಿ ಸ್ಷೇಶನ್ ನಲ್ಲಿ ಗುಂಡಿನ ದಾಳಿಗೆ ನಾಲ್ವರು ಬಲಿ

    ಪಂಜಾಬ್ ಎಪ್ರಿಲ್ 12: ಮಿಲಿಟರಿ ಸ್ಟೇಶನ್ ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ ನಾಲ್ವರು ಸಾವನಪ್ಪಿರುವ ಘಟನೆ ಪಂಜಾಬ್ ನ ಬಟಿಂಡಾ ಮಿಲಿಟರಿ ಸ್ಟೇಶನ್ ನಲ್ಲಿ ಬುಧವಾರ ಮುಂಜಾನೆ ನಡೆದಿದೆ.


    ಬೆಳಗ್ಗೆ 4.35ರ ಹೊತ್ತಿಗೆ ಮಿಲಿಟರಿ ನೆಲೆಯ ಒಳಗೆ ಗುಂಡಿನ ದಾಳಿ ನಡೆದಿದೆ. ಪ್ರದೇಶದ ಒಳಗೆ ಯಾರೋ ಅಪರಿಚಿತರು ಪ್ರವೇಶ ಮಾಡಿದ್ದನ್ನು ಅರಿತ ಕೂಡಲೇ ತುರ್ತು ಪ್ರತಿರೋಧ ತಂಡಗಳು ಕಾರ್ಯಾಚರಣೆಗೆ ಇಳಿದವು. ಶೋಧ ಕಾರ್ಯಾಚರಣೆ ಈಗಲೂ ಮುಂದುವರಿಯುತ್ತಿವೆ ಎಂದು ಸೇನೆ ತಿಳಿಸಿದೆ.

    ಎಸ್‌ಎಸ್‌ಪಿ ಬಟಿಂಡಾ ಪ್ರಕಾರ, “ಈ ಘಟನೆಯು ಭಯೋತ್ಪಾದಕ ದಾಳಿಯಲ್ಲ”. ಇದು ಭಯೋತ್ಪಾದಕ ದಾಳಿಯಂತೆ ಕಾಣುತ್ತಿಲ್ಲ. ಇದು ವೈಯಕ್ತಿಕ ಹತ್ಯೆಯ ಪ್ರಕರಣದಂತೆ ಕಾಣುತ್ತಿದೆ” ಎಂದುಪಂಜಾಬ್ ಪೊಲೀಸ್ ಹಾಗೂ ಗುಪ್ತಚರ ಮೂಲಗಳು ತಿಳಿಸಿವೆ.
    ಬಟಿಂಡಾ ಮಿಲಿಟರಿ ಠಾಣೆಯ ಫಿರಂಗಿ ಘಟಕದಲ್ಲಿ ಈ ಘಟನೆ ನಡೆದಿದೆ. ಈ ಪ್ರದೇಶದಲ್ಲಿ ಕುಟುಂಬಗಳು ಸಹ ವಾಸಿಸುತ್ತಿವೆ ಎಂದು ಮೂಲಗಳು ತಿಳಿಸಿವೆ. ಬಟಿಂಡಾ ಕಂಟೋನ್ಮೆಂಟ್‌ನೊಳಗೆ ಪೊಲೀಸರಿಗೆ ಕೂಡ ಪ್ರವೇಶಿಸಲು ಅನುಮತಿ ಇಲ್ಲ ಎಂದು ಮೂಲಗಳು ತಿಳಿಸಿವೆ.

    Share Information
    Advertisement
    Click to comment

    You must be logged in to post a comment Login

    Leave a Reply