BANTWAL
ಪಾಣೆಮಂಗಳೂರು ಸೆತುವೆಯಲ್ಲಿ ಕೆಟ್ಟು ನಿಂತ ಲಾರಿ – ಫುಲ್ ಟ್ರಾಫಿಕ್ ಜಾಮ್

ಬಂಟ್ವಾಳ ಅಕ್ಟೋಬರ್ 02: ಪಾಣೆಮಂಗಳೂರು ಸೇತುವೆ ಸಮೀಪ ಲಾರಿಯೊಂದು ಹಾಳಾದ ಪರಿಣಾಮ ಸುಮಾರು 1 ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾದ ಘಟನೆ ಸೋಮವಾರ ಮಧ್ಯಾಹ್ನದ ವೇಳೆ ನಡೆದಿದೆ.
ಲಾರಿಯ ಟಯರ್ ಬ್ಲಾಸ್ಟ್ ಗೊಂಡ ಕಾರಣ ನೇತ್ರಾವತಿ ಸೇತುವೆ ಮಧ್ಯ ಭಾಗದಲ್ಲಿ ಲಾರಿ ಬಾಕಿಯಾಗಿತ್ತು. ಹಾಗಾಗಿ ಸೇತುವೆ ಉದ್ದಕ್ಕೂ ವಾಹನಗಳು ಸಾಲು ಗಟ್ಟಿ ನಿಂತಿತ್ತು. ಬಳಿಕ ಟ್ರಾಫಿಕ್ ಎಸ್.ಐ.ಸುತೇಶ್ ಅವರು ಕ್ರೇನ್ ತರಿಸಿ ಲಾರಿಯನ್ನು ಸೇತುವೆಯಿಂದ ಇನ್ನೊಂದು ಬದಿಗೆ ಎಳೆದು ತರಲಾಯಿತು. ಕಳೆದ ಮೂರು ವಾರಗಳಲ್ಲಿ ಮೂರು ಬಾರಿ ಸೇತುವೆಯಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಕಂಡುಬಂದಿದೆ.

ಈಗಾಗಲೇ ಕಲ್ಲಡ್ಕ ಪರಿಸರದಲ್ಲಿ ರಸ್ತೆ ಕಾಮಗಾರಿಯಿಂದಾಗಿ ದಿನ ನಿತ್ಯವೂ ವಾಹನ ಸವಾರರು ಸಂಕಷ್ಟ ಪಡುತ್ತಿದ್ದಾರೆ. ಒಟ್ಟಾರೆ ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಸಂಚಾರ ದಿನದಿಂದ ದಿನಕ್ಕೆ ಕಠಿಣವಾಗುತ್ತಿದೆ.