Connect with us

    LATEST NEWS

    ಪಾಕಿಸ್ತಾನದ ಜಯ ಸಂಭ್ರಮಿಸಿದರೆ ದೇಶದ್ರೋಹ ಪ್ರಕರಣ: ಯೋಗಿ ಅದಿತ್ಯನಾಥ್‌ ಎಚ್ಚರಿಕೆ

    ಲಖನೌ, ಅಕ್ಟೋಬರ್ 28 : ಟಿ20 ವಿಶ್ವಕಪ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ಸೋತ ನಂತರ ದೇಶದ ಅಲ್ಲಲ್ಲಿ ಪಾಕಿಸ್ತಾನ ಜಯದ ಸಂಭ್ರಮಾಚರಣೆ ನಡೆದ ಬಗ್ಗೆ ವರದಿಯಾಗುತ್ತಿವೆ. ಇಂಥ ವರ್ತನೆಗಳ ವಿರುದ್ಧ ದೇಶದ್ರೋಹ ಕಾನೂನು ಪ್ರಯೋಗಿಸುವ ಎಚ್ಚರಿಕೆಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್‌ ನೀಡಿದ್ದಾರೆ.

    ಈ ಬಗ್ಗೆ ಯೋಗಿ ಆದಿತ್ಯನಾಥ್‌ ಅವರು ಗುರುವಾರ ಬೆಳಗ್ಗೆ ಟ್ವೀಟ್‌ ಮಾಡಿ ಮಾಹಿತಿ ನೀಡಿದ್ದಾರೆ.

    ಇದರ ಮಧ್ಯೆ, ಕ್ರಿಕೆಟ್‌ ಪಂದ್ಯಾವಳಿಯ ನಂತರ ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಸಂದೇಶಗಳನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ ಮತ್ತು ದೇಶ ವಿರೋಧಿ ಘೋಷಣೆ ಕೂಗಿದ ಆರೋಪದ ಮೇಲೆ ರಾಜಸ್ಥಾನದ ಉದಯಪುರದ ಖಾಸಗಿ ಶಾಲೆಯ ಶಿಕ್ಷಕ ಮತ್ತು ಉತ್ತರ ಪ್ರದೇಶದ ಆಗ್ರಾದಲ್ಲಿ ಓದುತ್ತಿರುವ ಕಾಶ್ಮೀರದ ಮೂವರು ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಬುಧವಾರ ಬಂಧಿಸಲಾಗಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *