FILM
ಪಾಕಿಸ್ತಾನಿಗಳ ನಿದ್ದೆಗೆಡಿಸಿದ ಮಾಡೆಲ್ ಬಿಕಿನಿ ರ‍್ಯಾಂಪ್ ವಾಕ್
ಲಾಹೋರ್ ಅಕ್ಟೋಬರ್ 24: ಪಾಕಿಸ್ತಾನಿ ಮಾಡೆಲ್ ಒಬ್ಬರು ಟೂ ಪಿಸ್ ಬಿಕಿನಿಯಲ್ಲಿ ರ್ಯಾಂಪ್ ವಾಕ್ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಮಿಸ್ ಗ್ರಾಂಡ್ ಇಂಟರ್‌ನ್ಯಾಷನಲ್ ಸೌಂದರ್ಯ ಸ್ಪರ್ಧೆಯಲ್ಲಿ ಹೊಂಬಣ್ಣದ ಬಿಕಿನಿಯಲ್ಲಿ ಮಿಂಚಿದ ರೂಪದರ್ಶಿ ರೊಮಾ ಮಿಷೆಲ್ ಬಿಕಿನಿಯಲ್ಲಿ ರ್ಯಾಂಪ್ ವಾಕ್ ಮಾಡುವ ಮೂಲಕ ತನ್ನ ದೇಶದ ಹೆಸರನ್ನು ಹೆಮ್ಮೆಯಿಂದ ಕೂಗಿ ಹೇಳಿದ ಇವರು, ಜಗತ್ತಿನ ಇತರ ರಾಷ್ಟ್ರಗಳ ಜನರ ಹುಬ್ಬೇರಿಸುವಂತೆ ಮಾಡಿದ್ದರೆ, ಇತ್ತ ಪಾಕಿಸ್ತಾನದಲ್ಲಿ ಸಂಪ್ರದಾಯವಾದಿಗಳ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ರೋಮಾ ಮೈಕೆಲ್ ಪಾಕಿಸ್ತಾನಿ ಕ್ರಿಶ್ಚಿಯನ್ ಮಾಡೆಲ್ ಆಗಿದ್ದು, ಅವರು Instagram ನಲ್ಲಿ 76,000 ಕ್ಕೂ ಹೆಚ್ಚು ಪಾಲೋವರ್ಸ್ ಹೊಂದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆದ ಬಳಿಕ ಇದೀಗ ವಿಡಿಯೋವನ್ನು ಅವರು ಡಿಲೀಟ್ ಮಾಡಿದ್ದಾರೆ. ಥಾಯ್ಲೆಂಡ್‌ನಲ್ಲಿ ನಡೆಯುತ್ತಿರುವ ಈ ಸ್ಪರ್ಧೆಯಲ್ಲಿ ಪಾಕಿಸ್ತಾನದಿಂದ ಪಾಲ್ಗೊಂಡ ಚೊಚ್ಚಲ ಅಭ್ಯರ್ಥಿ ರೊಮಾ. 29 ವರ್ಷದ ಇವರು ಪಾಕಿಸ್ತಾನದ ಕ್ರೈಸ್ತ ಸಮುದಾಯಕ್ಕೆ ಸೇರಿದವರು. ತನ್ನ ಈ ಸಾಧನೆಯನ್ನು ಹೆಮ್ಮೆಯಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಇವರು ಹಂಚಿಕೊಂಡಿದ್ದರು. ಸ್ವದೇಶದಲ್ಲಿ ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಅದನ್ನು ನಂತರ ಅಳಿಸಿಹಾಕಿದ್ದಾರೆ. ವಿರೋಧ ವ್ಯಕ್ತಪಡಿಸಿದವರಲ್ಲಿ ಹಲವರು ಪ್ರಾಣ ಬೆದರಿಕೆಯನ್ನೂ ಒಡ್ಡಿದ್ದಾರೆ ಎಂದು ವರದಿಯಾಗಿದೆ.