LATEST NEWS
ಪಡುಬಿದ್ರಿ ಸ್ಕೂಟರ್ ಗೆ ಡಿಕ್ಕಿ ಹೊಡೆದ ಕಾರು – 25 ಅಡಿ ದೂರಕ್ಕೆ ಎಸೆಯಲ್ಪಟ್ಟ ಸ್ಕೂಟರ್ ಸವಾರ ಸಾವು

ಉಡುಪಿ ನವೆಂಬರ್ 17: ಕಾರು ಹಾಗೂ ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ಸ್ಕೂಟರ್ ಸವಾರ ಸಾವನಪ್ಪಿರುವ ಘಟನೆ ಪಡುಬಿದ್ರಿಯ ಕೆಳಗಿನ ಪೇಟೆಯ ಹೆದ್ದಾರಿ ತಿರುವಿನಲ್ಲಿ ನಡೆದಿದೆ. ಮೃತರನ್ನು ಪಾದೆಬೆಟ್ಟು ನಿವಾಸಿ ಬಾಲಕೃಷ್ಣ ಭಟ್ (74) ಎಂದು ಗುರುತಿಸಲಾಗಿದೆ.
ಬಾಲಕೃಷ್ಣ ಭಟ್ ಅವರು ಮಂಗಳೂರು ಕಡೆಗೆ ಹೋಗುತ್ತಿದ್ದರು ಈ ವೇಳೆ ಉಡುಪಿ ಕಡೆಯಿಂದ ಹೆಜಮಾಡಿ ಕಡೆಗೆ ಬರುತ್ತಿದ್ದ ಕಾರು ಹಿಂಬದಿಯಿಂದ ಸ್ಕೂಟರ್‌ಗೆ ಢಿಕ್ಕಿಯಾಗಿದೆ. ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಅಪಘಾತ ಸಂಭವಿಸಿದ ಸ್ಥಳದಿಂದ ಸುಮಾರು 25 ಅಡಿ ದೂರಕ್ಕೆ ಎಸೆಯಲ್ಪಟ್ಟರು. ಕೂಡಲೇ ಜನರು ಭಟ್ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಮಾರ್ಗಮಧ್ಯೆ ಅವರನ್ನು ಆಂಬ್ಯುಲೆನ್ಸ್‌ಗೆ ಸ್ಥಳಾಂತರಿಸಲಾಯಿತು. ಅತಿಯಾದ ರಕ್ತಸ್ರಾವದಿಂದ ಬಾಲಕೃಷ್ಣ ಭಟ್ ಆಸ್ಪತ್ರೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದಾರೆ.
