Connect with us

LATEST NEWS

ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ವರ್ಗಾವಣೆ ಹಿಂದೆ ಲಾಬಿ? – ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ

ಮಂಗಳೂರು ಸೆಪ್ಟೆಂಬರ್ 06: ಮಂಗಳೂರು ನಗರ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ಅವರ ವರ್ಗಾವಣೆ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ರಾಜ್ಯ ಸರಕಾರದ ವಿರುದ್ದ ವಾಗ್ದಾಳಿ ನಡೆಸಿದ್ದು, ಜೈನ್ ವರ್ಗಾವಣೆ ಹಿಂದೆ ಲಾಬಿ ಕೆಲಸ ಮಾಡಿದೆ ಎಂದು ದೂರಿದ್ದಾರೆ.


2011ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಜೈನ್ ಫೆಬ್ರವರಿ 24 ರಂದು ಮಂಗಳೂರು ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದರು. ಎಸ್ಪಿ ಶ್ರೇಣಿಯ ಅಧಿಕಾರಿಯಾಗಿದ್ದ ಜೈನ್ ಅವರನ್ನು ಮಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ನೇಮಿಸಲಾಗಿತ್ತು, ಆದರೆ ಮಂಗಳೂರು ಪೊಲೀಸ್ ಕಮೀಷನರ್ ಆಗಲು ಐಜಿಪಿ ಶ್ರೇಣಿಯ ಅಧಿಕಾರಿಗಳಿಗೆ ಮಾತ್ರ ಅವಕಾಶ ಇತ್ತು, ಆದರೆ ಅಧಿಕಾರಿಗಳ ಅಲಭ್ಯತೆಯಿಂದಾಗಿ ಕುಲದೀಪ್ ಜೈನ್ ಅವರನ್ನು ಆಯುಕ್ತರಾಗಿ ನೇಮಿಸಲಾಗಿತ್ತು.


ಇದೀಗ ಜೈನ್ ಅವರ ಜಾಗಕ್ಕೆ 2008-ಬ್ಯಾಚ್‌ನ ಐಪಿಎಸ್ ಅಧಿಕಾರಿ ಅನ್ಪಮ್ ಅಗರ್ವಾಲ್ ಜೈನ್ ಅವರ ಸ್ಥಾನಕ್ಕೆ ಬರಲಿದ್ದಾರೆ. ಜೈನ್ ಅವರ ಮುಂದಿನ ಪೋಸ್ಟಿಂಗ್ ಬಗ್ಗೆ ಯಾವುದೇ ವಿವರಗಳಿಲ್ಲ.
ಕುಲದೀಪ್ ಜೈನ್ ಅಧಿಕಾರವಹಿಸಿಕೊಂಡ ನಂತರ ಮಂಗಳೂರು ನಗರದಲ್ಲಿ ಅಪರಾಧ ಕೃತ್ಯಗಳನ್ನು ನಿಗ್ರಹಿಸುವಲ್ಲಿ ಕಠಿಣ ಕ್ರಮಕೈಗೊಂಡಿದ್ದರು. ಜೂಜಾಟ, ಮಾದಕ ದ್ರವ್ಯದ ಹಾವಳಿ ಮತ್ತು ಅಕ್ರಮ ಮರಳು ಗಣಿಗಾರಿಕೆಯನ್ನು ನಿಯಂತ್ರಿಸಲು ಹಲವಾರು ಕ್ರಮಗಳನ್ನು ಕೈಗೊಂಡರು ಮತ್ತು ನಗರದ ಟ್ರಾಫಿಕ್ ಪರಿಸ್ಥಿತಿಯಲ್ಲಿ ಭಾರಿ ಸುಧಾರಣೆಗಳನ್ನು ತಂದರು. ‘ನೈತಿಕ ಪೋಲೀಸಿಂಗ್’ ಮತ್ತು ಇತರ ದ್ವೇಷದ ಅಪರಾಧಗಳನ್ನು ನಿಭಾಯಿಸಲು, ಅವರು ಕೋಮು ವಿರೋಧಿ ವಿಭಾಗವನ್ನು ಪ್ರಾರಂಭಿಸಿದರು, ಬೀಚ್‌ಗಳು ಮತ್ತು ಮಾಲ್‌ಗಳಲ್ಲಿ ಗಸ್ತು ತಿರುಗುವಿಕೆಯನ್ನು ತೀವ್ರಗೊಳಿಸಿದರು. ನೈತಿಕ ಪೊಲೀಸ್‌ಗಿರಿಯ ಪುನರಾವರ್ತಿತ ಅಪರಾಧಿಗಳನ್ನು ಜಿಲ್ಲೆಯಿಂದ ಹೊರ ಹಾಕಲು ಅವರು ಕ್ರಮ ಕೈಗೊಂಡಿದ್ದರು. ಆದರೆ ಸರಕಾರ ಇದೀಗ ಜೈನ್ ವರ್ಗಾವಣೆ ಮಾಡಿದ್ದರಿಂದ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಪ್ರಾಮಾಣಿಕ ಅಧಿಕಾರಿಯನ್ನು ಸರಕಾರ ಲಾಭಿಗೆ ಮಣಿದು ವರ್ಗಾವಣೆ ಮಾಡಿದೆ ಎಂದು ದೂರಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *