DAKSHINA KANNADA
625ಕ್ಕೆ 625 ಅಂಕ ಪಡೆದ ಸುಬ್ರಹ್ಮಣ್ಯ ಕುಮಾರಸ್ವಾಮಿ ಪ್ರೌಢಶಾಲೆಯ ವಿದ್ಯಾರ್ಥಿ ಅನುಷ್ ಎ ಎಲ್
ಸುಬ್ರಹ್ಮಣ್ಯ ಅಗಸ್ಟ್ 10: ಕೊರೊನಾ ಲಾಕ್ ಡೌನ್ ಗಳ ನಡುವೆ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ಚಿಕ್ಕಬಳ್ಳಾಪುರ ಜಿಲ್ಲೆ ಪ್ರಥಮ ಸ್ಥಾನ ಪಡೆದಿದ್ದು, ದಕ್ಷಿಣಕನ್ನಡ ಜಿಲ್ಲೆ 12 ನೇ ಸ್ಥಾನಕ್ಕೆ ಇಳಿದಿದೆ.
ಪ್ರತಿ ಸಾರಿಯಂತೆ ಈ ಬಾರಿಯೂ ವಿದ್ಯಾರ್ಥಿನಿಯರೇ ಮೆಲುಗೈ ಸಾಧಿಸಿದ್ದಾರೆ. ಫಲಿತಾಂಶದಲ್ಲಿ 12ನೇ ಸ್ಥಾನಕ್ಕೆ ದಕ್ಷಿಣಕನ್ನಡ ಜಿಲ್ಲೆ ಕುಸಿದರೂ ಜಿಲ್ಲೆಯ ಸುಳ್ಯ ತಾಲೂಕು ಸುಬ್ರಹ್ಮಣ್ಯ ವಿದ್ಯಾನಗರದ ಕುಮಾರಸ್ವಾಮಿ ಪ್ರೌಢಶಾಲೆಯ ವಿದ್ಯಾರ್ಥಿ ಅನುಷ್ ಎ.ಎಲ್. 625ರಲ್ಲಿ 625 ಅಂಕ ಪಡೆದು ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾನೆ.
ಅನುಷ್ ಎ.ಎಲ್ ಬಳ್ಫ ಗ್ರಾಮದ ಲೋಕೇಶ್ ಹಾಗೂ ಉಷಾ ದಂಪತಿಯ ಪುತ್ರ. ಪೋಷಕರು ಹಾಗೂ ಶಾಲಾ ಶಿಕ್ಷಕರು ಮತ್ತು ಆಡಳಿತ ಮಂಡಳಿಯವರು ಅನುಷ್ ಅವರ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳ ಪೈಕಿ 5,82,316 ಮಂದಿ ಉತ್ತೀರ್ಣರಾಗಿದ್ದು, 2,28,734 ಅನುತ್ತೀರ್ಣರಾಗಿದ್ದಾರೆ. ಈ ಬಾರಿ ಒಟ್ಟು ಶೇ.71.80 ಫಲಿತಾಂಶ ಬಂದಿದೆ. ಒಟ್ಟು 227 ಮೌಲ್ಯಮಾಪನ ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆದಿತ್ತು.