Connect with us

KARNATAKA

ಮಳೆಯಿಂದ ರಕ್ಷಣೆ ಪಡೆಯಲು ಮರದಡಿ ನಿಂತ ಯುವಕ ಸಿಡಿಲು ಬಡಿದು ಮೃತ್ಯು..!

ಮಳೆ  ಕಾರಣ ಮರದ ಕೆಳಗೆ ನಿಂತಾಗ ಸಿಡಿಲು ಬಡಿದು ಯುವಕನೋರ್ವ ಮೃತಪಟ್ಟಿರುವ ದಾರುಣ ಘಟನೆ ವಿಜಯನಗರದ ಹೂವಿನಹಡಗಲಿ ತಾಲ್ಲೂಕಿನ ಅರಳಿಹಳ್ಳಿ ಗ್ರಾಮದ ಬಳಿ ಗುರುವಾರ ಸಂಜೆ ನಡೆದಿದೆ.

ವಿಜಯನಗರ : ಮಳೆ  ಕಾರಣ ಮರದ ಕೆಳಗೆ ನಿಂತಾಗ ಸಿಡಿಲು ಬಡಿದು ಯುವಕನೋರ್ವ ಮೃತಪಟ್ಟಿರುವ ದಾರುಣ ಘಟನೆ ವಿಜಯನಗರದ ಹೂವಿನಹಡಗಲಿ ತಾಲ್ಲೂಕಿನ ಅರಳಿಹಳ್ಳಿ ಗ್ರಾಮದ ಬಳಿ ಗುರುವಾರ ಸಂಜೆ ನಡೆದಿದೆ.

ಮಾನ್ಯರಮಸವಾಡ ಗ್ರಾಮದ ಸಂಜು ತೋಟಣ್ಣನವರ (26) ಮೃತ ಯುವಕನಾಗಿದ್ದಾನೆ. ಹೊಸಳ್ಳಿ ಗ್ರಾಮದ ಸಂಬಂಧಿಕರ ಮನೆಗೆ ತೆರಳಿ ವಾಪಸ್‌ ಬೈಕ್‌ನಲ್ಲಿ ಊರಿಗೆ ಬರುವ ವೇಳೆ ಮಳೆ ಪ್ರಾರಂಭವಾಗಿತ್ತು. ಆದ್ದರಿಂದ  ಅರಳಿಹಳ್ಳಿ ಸಮೀಪ ಬೈಕ್‌ ನಿಲ್ಲಿಸಿ ಮರದ ಕೆಳಗೆ ನಿಂತ ವೇಳೆ ಸಿಡಿಲು ಬಡಿದಿದ್ದು ಸಂಜು ಸ್ಥಳದಲ್ಲೇ ಸಾವನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

 

 


 

Share Information
Continue Reading
Advertisement
Click to comment

Leave a Reply

Your email address will not be published. Required fields are marked *